ಜೀರೋ ಫಿಗರ್ ಆಗ್ಬೇಕು ಅಂದ್ರೆ ಪ್ರತಿನಿತ್ಯ ಈ ಗಿಡದ ಎರಡು ಎಲೆ ತಿನ್ನಿ

Pic Credit: pinterest

By Preeti Bhat

22 July 2025

ಗಿಡಮೂಲಿಕೆಗಳು

ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳಿವೆ. ಆದರೆ, ನಾವು ಅದರ ಬಗ್ಗೆ ಗಮನಹರಿಸಬೇಕಾಗುತ್ತದೆ.

ಸಾಂಬ್ರಾಣಿ ಎಲೆ

ಇಂತಹ ಔಷಧ ಗುಣಗಳಿರುವ ಸಸ್ಯಗಳಲ್ಲಿ ದೊಡ್ಡಪತ್ರೆಯೂ ಒಂದು. ಇದನ್ನು ಸಾಂಬಾರ್ ಸೊಪ್ಪು, ಸಾಂಬ್ರಾಣಿ ಎಲೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

ಬೊಜ್ಜನ್ನು ಕರಗಿಸುತ್ತದೆ

ದೊಡ್ಡಪತ್ರೆ ಎಲೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಬೊಜ್ಜು ಕರಗುತ್ತದೆ. ನಮ್ಮ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

ಕೀಲು ನೋವು

ಈ ಎಲೆಯನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರವಲ್ಲ ಕೀಲು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚಯಾಪಚಯ ಶಕ್ತಿ

ಪ್ರತಿದಿನ ಎರಡು ದೊಡ್ಡಪತ್ರೆ ಎಲೆಗಳನ್ನು ಅಗಿದು ತಿನ್ನುವುದರಿಂದ ದೇಹದಲ್ಲಿನ ಚಯಾಪಚಯ ಶಕ್ತಿ ಹೆಚ್ಚಾಗುತ್ತದೆ.

ಸಾಂಬಾರ್ ಸೊಪ್ಪು

ಸಾಂಬಾರ್ ಸೊಪ್ಪಿನ ಎಲೆಗಳನ್ನು ಜೇನುತುಪ್ಪ ಮತ್ತು ವಿನೆಗರ್ ನೊಂದಿಗೆ ಬೆರೆಸಿ ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ವಿಷ ಹೊರ ಹೋಗುತ್ತದೆ.

ರಕ್ತಹೀನತೆ

ಈ ಎಲೆಗಳ ಸೇವನೆಯು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇದು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮುಟ್ಟಿನ ನೋವು

ದೊಡ್ಡಪತ್ರೆ ಎಲೆಗಳು ಮಹಿಳೆಯರು ಅನುಭವಿಸುವ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ಸೇವನೆ ಮಾಡಬಾರದು.