ಕ್ಯಾಲ್ಸಿಯಂ ಕಡಿಮೆ ಆಗಿದ್ರೆ ಈ ಒಂದು ತರಕಾರಿಯನ್ನು ತಪ್ಪದೆ ಸೇವನೆ ಮಾಡಿ

Pic Credit: pinterest

By Preeti Bhat

15 August 2025

 ಫ್ಲಾಟ್ ಬೀನ್ಸ್

ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಬಗೆಯ ತರಕಾರಿಗಳಲ್ಲಿ ಚಪ್ಪರದ ಅವರೆಕಾಯಿ ಅಥವಾ ಫ್ಲಾಟ್ ಬೀನ್ಸ್ ಕೂಡ ಒಂದು.

ಆರೋಗ್ಯ ಪ್ರಯೋಜನ

ಈ ತರಕಾರಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ.

ಅತಿಸಾರ ತಡೆಯುತ್ತೆ

ಫ್ಲಾಟ್ ಬೀನ್ಸ್ ಅಥವಾ ಚಪ್ಪರದ ಅವರೆಕಾಯಿಯ ಜೀರ್ಣಕಾರಿ ಸಮಸ್ಯೆಗಳು ಮತ್ತು ಅತಿಸಾರವನ್ನು ತಡೆಯಲು ಸಹಾಯ ಮಾಡುತ್ತದೆ.

ಮಧುಮೇಹದ ನಿಯಂತ್ರಣ

ಚಪ್ಪರದ ಅವರೆಕಾಯಿ ಮಧುಮೇಹವನ್ನು ನಿಯಂತ್ರಿಸುವುದರ ಜೊತೆಗೆ, ಅವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ.

ಹೃದಯ ಆರೋಗ್ಯವಾಗಿರುತ್ತೆ

ಚಪ್ಪರದ ಅವರೆಕಾಯಿಯಲ್ಲಿ ಕಂಡುಬರುವ ವಿಟಮಿನ್ ಬಿ1 ಮೆದುಳಿನ ಕಾರ್ಯಕ್ಕೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಉಸಿರಾಟದ ಸಮಸ್ಯೆ

ಚಪ್ಪರದ ಅವರೆಕಾಯಿಯಲ್ಲಿರುವ ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಂತಹ ಖನಿಜಗಳು ಉಸಿರಾಟದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ತೂಕ ಕಡಿಮೆಯಾಗುತ್ತೆ

ಚಪ್ಪರದ ಅವರೆಕಾಯಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಹಸಿವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

ರಕ್ತಹೀನತೆ ನಿವಾರಿಸುತ್ತೆ

ರಕ್ತಹೀನತೆ ಮತ್ತು ಮೂಳೆ ದೌರ್ಬಲ್ಯದಿಂದ ಬಳಲುತ್ತಿರುವವರಿಗೆ ಚಪ್ಪರದ ಅವರೆಕಾಯಿ ಬಹಳ ಒಳ್ಳೆಯದು, ವಿಶೇಷವಾಗಿ ಗರ್ಭಿಣಿ ಇದನ್ನು ತಪ್ಪದೆ ತಿನ್ನಬೇಕು.