ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸನ್ನು ಅಡುಗೆಯಲ್ಲಿ ಈ ರೀತಿ ಬಳಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರಲ್ಲ

Pic Credit: gettyimages

By Preeti Bhatt

16 April 2025

ಕರಿದ ಆಹಾರ

ಕರಿದ ಆಹಾರ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ? ಆದರೆ ಅದನ್ನು ತಿಂದ ಬಳಿಕ ಕಂಡುಬರುವಂತಹ ಸಮಸ್ಯೆ ಸಾಕಷ್ಟಿದೆ.

ಗ್ಯಾಸ್ಟ್ರಿಕ್ ಸಮಸ್ಯೆ

ಸಾಮಾನ್ಯವಾಗಿ ಕೆಲವರಿಗೆ ಜೀರ್ಣಶಕ್ತಿಯ ಕೊರತೆ, ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ ಅಂತವರು ಕೆಲವು ಆಹಾರ ತಿಂದಾಗ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸು

ಈ ರೀತಿ ಸಮಸ್ಯೆ ತಡೆಯಲು ಆಹಾರದಲ್ಲಿ ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸನ್ನು ಸೇರಿಸಿಕೊಳ್ಳಿ. ಹೀಗೆ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ.

ಈ ಮೂರು ಪದಾರ್ಥಗಳು

ಈ ಮೂರು ಪದಾರ್ಥಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಆ ಬಳಿಕ ನೀವು ಸೇವನೆ ಮಾಡುವ ಆಹಾರದಲ್ಲಿ ಬಳಕೆ ಮಾಡಿ.

ಜೀರ್ಣಶಕ್ತಿ

ಈ  ಮೂರರಲ್ಲಿಯೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದ್ದು, ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ.

ಅಜೀರ್ಣತೆ, ವಾಕರಿಕೆ

ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣತೆ, ವಾಕರಿಕೆ, ಸಣ್ಣ ಸಣ್ಣ ನೋವುಗಳನ್ನು ಕೂಡ ಶಮನ ಮಾಡುವಂತಹ ಶಕ್ತಿಯನ್ನು ಹೊಂದಿದೆ.

ಶುಂಠಿ ಸೇವನೆ

ಬೆಳ್ಳುಳ್ಳಿ ಸೇವನೆ ಮಾಡದವರು ಶುಂಠಿ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಅಡುಗೆಯಲ್ಲಿ ಬಳಕೆ ಮಾಡಬಹುದು.

ಮಲಬದ್ಧತೆಯ ಸಮಸ್ಯೆ

ಈ ರೀತಿ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ, ಅಜೀರ್ಣತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ನಿವಾರಣೆಯಾಗುತ್ತದೆ.

ಮಾತ್ರೆಗಳ ಮೊರೆ 

ಸಣ್ಣ ಸಣ್ಣದಕ್ಕೂ ಮಾತ್ರೆಗಳ ಮೊರೆ ಹೋಗುವ ಬದಲು ಆಹಾರದಲ್ಲಿಯೇ ಕೆಲವು ಬದಲಾವಣೆ ಮಾಡುವ ಮೂಲಕ ಆರೋಗ್ಯವಾಗಿರಿ.