Pic Credit: pinterest
By Malashree anchan
24 September 2025
ನಮ್ಮ ದೇಹಕ್ಕೆ ವಿಟಮಿನ್ ಡಿ ತುಂಬಾ ಅವಶ್ಯಕ ಎಂಬುದು ತಿಳಿದ ವಿಚಾರ. ಆದರೆ ಕೆಲವೊಮ್ಮೆ ನಮ್ಮ ಮುಖವು ಕೂಡ ವಿಟಮಿನ್ ಡಿ ಕೊರತೆ ಬಗ್ಗೆ ಸೂಚನೆ ನೀಡಬಹುದು.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇಲ್ಲದಿದ್ದರೆ, ಮುಖದಲ್ಲಿ ಹಠಾತ್ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಒಣಗಿ ತುರಿಕೆ ಸಹಿತ ಕೆಂಪು ಗುಳ್ಳೆಗಳು ಕಂಡು ಬರಬಹುದು.
ವಿಟಮಿನ್ ಡಿ ಕೊರತೆಯಾದಾಗ ಕೂದಲು ಸರಿಯಾಗಿ ಬೆಳೆಯುವುದಿಲ್ಲ, ಅತಿಯಾಗಿ ಉದುರುತ್ತದೆ ಮತ್ತು ಮೂಳೆಗಳು ದುರ್ಬಲವಾಗಿ ಬೇಗ ಮುರಿಯಬಹುದು.
ವಿಟಮಿನ್ ಡಿ ಕೊರತೆ ಉಂಟಾದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ. ಹಲ್ಲುಗಳು ಸುಲಭವಾಗಿ ಮುರಿದು ಹೋಗಬಹುದು.
ಚರ್ಮವು ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಉತ್ಪಾದಿಸುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸದಿರುವುದು ಈ ಸಮಸ್ಯೆಗೆ ಕಾರಣವಾಗಬಹುದು.
ಹೆಚ್ಚಿನ ಮೆಲನಿನ್ ಹೊಂದಿರುವವರು ಅಂದರೆ ಕಪ್ಪು ಚರ್ಮ ಹೊಂದಿರುವವರು ಸೂರ್ಯನ ಬೆಳಕಿನಿಂದ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಡಿಯನ್ನು ಪಡೆಯುತ್ತಾರೆ.
ನೈಸರ್ಗಿಕವಾಗಿಯೇ ಸಮಸ್ಯೆಗಳನ್ನು ಕಡಿಮೆ ಮಾಡಲು, ಪ್ರತಿದಿನ ಬೆಳಿಗ್ಗೆ 10 ರಿಂದ 20 ನಿಮಿಷವಾದರೂ ಸೂರ್ಯನ ಬೆಳಕಿನಲ್ಲಿ ನಿಂತುಕೊಳ್ಳಿ.
ವಿಟಮಿನ್ ಡಿ ಸಮೃದ್ಧವಾಗಿರುವ ಮೀನು, ಮೊಟ್ಟೆಯ ಹಳದಿ ಲೋಳೆ ಮತ್ತು ಅಣಬೆಗಳಂತಹ ಆಹಾರವನ್ನು ಸೇವಿಸಿ. ಇದೆಲ್ಲವನ್ನೂ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.