ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವ ಮೊದಲು ಈ ತಪ್ಪುಗಳನ್ನು ಮಾಡಬೇಡಿ

Pic credit - Getty Images

By: Preethi Bhat 

TV9 Kannada Logo For Webstory First Slide

3 April 2025

TV9 Kannada Logo For Webstory First Slide

ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವ ಮೊದಲು ಈ ತಪ್ಪುಗಳನ್ನು ಮಾಡಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕ ಜನರು ನಂಬುತ್ತಾರೆ.

ಆದರೆ ಇದರಿಂದ ಆರೋಗ್ಯ ಪ್ರಯೋಜನಗಳು ಮಾತ್ರವಲ್ಲ. ಕೆಲವು ಸಮಸ್ಯೆಗಳಿಗೂ ಸಹ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಆಗಾಗ ಕುಡಿಯುವುದರಿಂದ ಒಸಡುಗಳಿಗೆ ಹಾನಿಯಾಗುತ್ತದೆ.

ನಿಂಬೆ ರಸದಲ್ಲಿರುವ ಸಿಟ್ರಸ್ ಆಮ್ಲವು ಬಿಸಿ ನೀರಿನೊಂದಿಗೆ ಬೆರೆತು ಹಲ್ಲುಗಳಿಗೂ ಕೂಡ ಹಾನಿಯಾಗುತ್ತದೆ.

ಬಿಸಿ ನೀರಿನಲ್ಲಿ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಆಮ್ಲೀಯತೆಯ ಸಮಸ್ಯೆಯೂ ಉಂಟಾಗಬಹುದು.

ನಿಂಬೆ ರಸವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಬಿಸಿ ನೀರಿನೊಂದಿಗೆ ಬೆರೆಸಿ ಕುಡಿಯುವಾಗ ಎಚ್ಚರಿಕೆಯಿಂದ ಇರಿ.

ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಕುಡಿಯುವ ಮೊದಲು ಸಾಮಾನ್ಯ ನೀರಿನಿಂದ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸುವುದು ಅವಶ್ಯಕ.

ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾವಿದ್ದರೆ ಅದನ್ನು ನೇರವಾಗಿ ಕುಡಿದಾಗ ಅವು ಹೊಟ್ಟೆಗೆ ಹೋಗುವ ಅಪಾಯವಿದೆ.

ಹಾಗಾಗಿ ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವ ಅಭ್ಯಾಸವಿರುವವರು ವೈದ್ಯರ ಸಲಹೆ ಪಡೆದುಕೊಳ್ಳಿ. ಇದು ನಿಮ್ಮ ದೇಹಕ್ಕೆ ಒಳ್ಳೆಯದೋ? ಅಲ್ಲವೋ ತಿಳಿದುಕೊಳ್ಳಿ.