ಪೇರಳೆ ಎಲೆ ಟೀ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ

Pic Credit: pinterest

By Malashree anchan

20 August 2025 

ರೋಗನಿರೋಧಕ ಶಕ್ತಿ

ಪೇರಳೆ ಎಲೆಯಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಗುಣಗಳಿವೆ. ಹೀಗಿರುವಾಗ ಇದರ ಟೀ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.

ದೃಷ್ಟಿ  ಸುಧಾರಣೆ

ಪೇರಳೆ ಎಲೆಗಳು ವಿಟಮಿನ್ ಎ ಯ ಪ್ರಬಲ ಮೂಲವಾಗಿದ್ದು, ಇದು ದೃಷ್ಟಿ ಸುಧಾರಿಸಲು, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಒತ್ತಡ ನಿವಾರಣೆ

ಪೇರಳೆ ಎಲೆ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಮತ್ತು ಆಯಾಸ ನಿವಾರಣೆಯಾಗುತ್ತದೆ.

ಕೂದಲಿಗೆ ಪ್ರಯೋಜನಕಾರಿ

ಪೇರಳೆ ಎಲೆಯ ಚಹಾ ಕುಡಿಯುವುದರಿಂದ ನಮ್ಮ ಕೂದಲು ಬಲವಾಗಿ ಮತ್ತು ದಪ್ಪವಾಗಿ ಬೆಳೆಯುತ್ತದೆ. ಜೊತೆಗೆ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ

ಇದು ಚರ್ಮದ ಕಲೆ ತೆಗೆದುಹಾಕಲು ಸಹಕಾರಿ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ನೀವು ಸಹ ಪೇರಳೆ ಎಲೆ ಚಹಾ ಮಾಡಿ ಪ್ರತಿದಿನ ಕುಡಿಯಿರಿ.

ಮಧುಮೇಹ ನಿಯಂತ್ರಣ

ಪೇರಳೆ ಎಲೆ ಚಹಾವು ಮಧುಮೇಹ ನಿಯಂತ್ರಣ ಮಾಡುತ್ತದೆ. ಈ ಚಹಾವು ಪ್ರಿಡಿಯಾಬಿಟಿಸ್, ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಹೃದಯಾರೋಗ್ಯಕ್ಕೆ ಸಹಕಾರಿ

ಈ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಉರಿಯೂತ, ಆಕ್ಸಿಡೇಟಿವ್ ಒತ್ತಡವನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಸಹಕಾರಿ

ಪೇರಳೆ ಎಲೆಯಲ್ಲಿರುವ ಉತ್ಕರ್ಷಣ ನಿರೋಧಕ, ಫೈಬರ್ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಇಳಿಕೆಗೆ ಸಹಕಾರಿಯಾಗಿದೆ.