ಕಮಲದ ಬೇರನ್ನು ಹೀಗೆ ಬಳಸಿ ಆರೋಗ್ಯ ಲಾಭ ಪಡೆದುಕೊಳ್ಳಿ

Pic Credit: pinterest

By Sai Nanda

11 September  2025

ಪೋಷಕಾಂಶಗಳಿಂದ ಸಮೃದ್ಧ

ಕಮಲದ ಬೇರು ಫೈಬರ್, ವಿಟಮಿನ್ ಗಳು ಹಾಗೂ ಖನಿಜಗಳಿಂದ ಸಮೃದ್ಧವಾಗಿವೆ.

ಅಡುಗೆಯಲ್ಲಿ ಬಳಕೆ

ಕಮಲದ ಬೇರನ್ನು ಸೂಪ್ ಅಥವಾ ವಿವಿಧ ಅಡುಗೆಯಲ್ಲಿ ಬಳಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ತೂಕ ನಿರ್ವಹಣೆಗೆ ಸಹಕಾರಿ

ಕಮಲದ ಬೇರುಗಳಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಹೃದಯದ ಆರೋಗ್ಯ

ಕಮಲದ ಬೇರುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿ, ಹೃದಯದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಶುಗರ್ ಲೆವೆಲ್ ಕಂಟ್ರೋಲ್

ಈ ಬೇರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ

ಕಮಲದ ಬೇರಿನಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಿ,  ಮಲಬದ್ಧತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಾಗಿಸುತ್ತದೆ.

ಮುಟ್ಟಿನ ಚಕ್ರ

ಮಹಿಳೆಯರ ತಿಂಗಳ ಮುಟ್ಟಿನ ಚಕ್ರವನ್ನು ನಿಯಂತ್ರಿಸುತ್ತದೆ ಹಾಗೂ ರಕ್ತಹೀನತೆಯನ್ನು ತಡೆಯುತ್ತದೆ.

ನಿರೋಧಕ ಗುಣ

ಕಮಲದ ಬೇರಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆರೋಗ್ಯವನ್ನು ಕಾಪಾಡುತ್ತದೆ.