Pic Credit: pinterest
By Preeti Bhat
28 May 2025
ಶಿಶುವಿನ ಬೆಳವಣಿಗೆ ಆಗುತ್ತಿದ್ದಂತೆ ಅಂದರೆ ಸುಮಾರು ಆರು ತಿಂಗಳ ನಂತರ ಮಕ್ಕಳಿಗೆ ಘನ ಆಹಾರಗಳನ್ನು ನೀಡಲಾಗುತ್ತದೆ.
ಸಾಮಾನ್ಯವಾಗಿ ಮಕ್ಕಳಿಗೆ ಈ ಸಮಯದಲ್ಲಿ ನೀಡುವ ಆಹಾರಗಳು ಅವರ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಆದರೆ ಕೆಲವು ತಾಯಂದಿರಿಗೆ, ತಮ್ಮ ಮಕ್ಕಳಿಗೆ ಮಸಾಲೆ ಪದಾರ್ಥಗಳು ಅಥವಾ ಖಾರವಾದ ಆಹಾರಗಳನ್ನು ಯಾವಾಗ ನೀಡಬೇಕು ಎಂಬ ಅನುಮಾನವಿರುತ್ತದೆ.
ಸಾಮಾನ್ಯವಾಗಿ ಮಕ್ಕಳಿಗೆ ಏಳು ತಿಂಗಳು ಕಳೆದ ನಂತರ ಸ್ವಲ್ಪ ಸ್ವಲ್ಪವೇ ಮಸಾಲೆ ಪದಾರ್ಥಗಳನ್ನು ನೀಡಬಹುದು.
ಇಲ್ಲವಾದಲ್ಲಿ ಒಂದು ವರ್ಷದ ನಂತರ ಮಸಾಲೆ ಪದಾರ್ಥಗಳನ್ನು ನೀಡಲು ಆರಂಭ ಮಾಡಬಹುದು.
ಮಗುವಿಗೆ ಆಹಾರದಲ್ಲಿ ಚಿಟಿಕೆಯಷ್ಟು ಇಂಗು, ಅರಿಶಿನ, ಗರಮ್ ಮಸಾಲ, ದಾಲ್ಚಿನ್ನಿ, ಜೀರಿಗೆ, ಲವಂಗ, ಏಲಕ್ಕಿಯನ್ನು ಪುಡಿ ಮಾಡಿ ನೀಡಬಹುದು.
ಆದರೆ ಅತಿ ಖಾರವಿರುವ ಯಾವುದೇ ಆಹಾರಗಳನ್ನು ಅಥವಾ ಮಸಾಲೆ ಅಧಿಕವಾಗಿರುವ ಆಹಾರಗಳನ್ನು ನೀಡಬಾರದು.
ಇನ್ನು ಒಂದು ವರ್ಷದ ನಂತರ ಮಕ್ಕಳಿಗೆ ಮಾಂಸಾಹಾರಗಳನ್ನು ನೀಡುವುದು ಒಳ್ಳೆಯದು. ಆದರೆ ಸಲ್ಪ ಸ್ವಲ್ಪವೇ ನೀಡಿ.