ಈ ಸೊಳ್ಳೆಗಳಿಂದ ಡೆಂಘಿ ಬರುತ್ತೆ ಹುಷಾರಾಗಿರಿ

Pic Credit: pinterest

By Preeti Bhat

04 June 2025

ಡೆಂಘಿ ಭೀತಿ

ಕರ್ನಾಟಕದಲ್ಲಿ ಡೆಂಘಿ ಭೀತಿ ಆರಂಭವಾಗಿದ್ದು, ಈಗಾಗಲೇ ಡೆಂಘಿ ಕೇಸುಗಳ ಸಂಖ್ಯೆ 1 ಸಾವಿರದ ಗಡಿ ದಾಟಿರುವುದು ಆತಂಕ ಮೂಡಿಸಿದೆ.

ಮಳೆ

ಅದಲ್ಲದೆ ಮಳೆ ಬರುವ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ರೀತಿಯ ಕಾಯಿಲೆಗಳ ಬಗ್ಗೆ ಜನರು ಹೆಚ್ಚಿನ ನಿಗಾ ವಹಿಸುವುದು ಬಹಳ ಮುಖ್ಯವಾಗಿದೆ.

ಡೆಂಘಿ ಹರಡುವ ಸೊಳ್ಳೆ

ಡೆಂಘಿ ಹರಡುವ ಸೊಳ್ಳೆಗಳು ಕೆಲವು ಸಮಯದಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ಆ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸುವುದು ಅವಶ್ಯವಾಗಿದೆ.

ಝಿಕಾ ವೈರಸ್

ಈಡಿಸ್​ ಈಜಿಪ್ಟಿ ಹೆಣ್ಣು ಸೊಳ್ಳೆಯು ಕೇವಲ ಡೆಂಘಿ ಮಾತ್ರವಲ್ಲದೇ ಚಿಕುನ್ ​ಗುನ್ಯಾ, ಝಿಕಾ ವೈರಸ್​ನಂತಹ ಇನ್ನಿತರ ಮಾರಣಾಂತಿಕ ಕಾಯಿಲೆಗಳನ್ನೂ ಹರಡುತ್ತದೆ.

ಸೊಳ್ಳೆಯ  ಎತ್ತರ

ಈ ಸೊಳ್ಳೆಗಳ ಬಗ್ಗೆ ನಾವು ತಿಳಿದುಕೊಳ್ಳಬಹುದಾದ ಮತ್ತೊಂದು ಅಂಶವೆಂದರೆ ಇವು ತುಂಬಾ ಎತ್ತರಕ್ಕೆ ಹಾರಲಾರವು.

ಮೊಣಕಾಲು

ಈ ಸೊಳ್ಳೆಗಳು ಜನರ ಪಾದ, ಕಾಲು ಹಾಗೂ ಮೊಣಕಾಲುಗಳ ಭಾಗದಲ್ಲಿ ಹೆಚ್ಚಾಗಿ ಕಚ್ಚುತ್ತದೆ. ಅಲ್ಲದೆ ಮೂಳೆಗಳು ಸುಲಭವಾಗಿ ಸಿಗುವ ಜಾಗದಲ್ಲಿ ಕಚ್ಚುತ್ತವೆ

ಸೂರ್ಯೋದಯ

ಡೆಂಘಿ ಸೊಳ್ಳೆಗಳು ಸೂರ್ಯೋದಯ ಆದ ನಂತರ ಸುಮಾರು ಎರಡು ಗಂಟೆಗಳ ಕಾಲ ಮತ್ತು ಸಂಜೆ ಸಮಯದಲ್ಲಿ ಕೆಲವು ಗಂಟೆಗಳ ಕಾಲ ಸಕ್ರಿಯವಾಗಿ ಇರುತ್ತವೆ.

ಬೆಳಕು

ಒಂದು ವೇಳೆ ರಾತ್ರಿ ಸಮಯದಲ್ಲಿ ಬೆಳಕು ಇದ್ದಲ್ಲಿ ಆಗ ಡೆಂಘಿಗೆ ಕಾರಣವಾಗುವ ಈಡಿಸ್ ಈಜಿಪ್ಟಿ ಸೊಳ್ಳೆಯ ಅಪಾಯವಿರುತ್ತದೆ.