Pic Credit: pinterest
By Preeti Bhat
05 July 2025
ಕೆಲವರು ಸೋರೆಕಾಯಿಯನ್ನು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇದರಿಂದ ಎಲ್ಲಾ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವ ಈ ತರಕಾರಿಯನ್ನು ಕೆಲವರು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅನಿಲ, ಅಜೀರ್ಣ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳಿರುವವರು ಈ ತರಕಾರಿ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಈಗಾಗಲೇ ಕಡಿಮೆ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ತರಕಾರಿ ಸೇವನೆ ಮಾಡುವುದು ಸೂಕ್ತವಲ್ಲ.
ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ತರಕಾರಿಯ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಗರ್ಭಾವಸ್ಥೆಯಲ್ಲಿ, ಸೋರೆಕಾಯಿ ರಸವನ್ನು ಸೇವಿಸಬಾರದು ಅಥವಾ ಹಸಿಯಾಗಿ ತಿನ್ನಬಾರದು.
ಅಲರ್ಜಿ ಇರುವವರು ಸೋರೆಕಾಯಿ ಸೇವಿಸುವುದರಿಂದ ಚರ್ಮದ ಕಿರಿಕಿರಿ, ದದ್ದುಗಳು, ಊತ ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವವರು ಹೆಚ್ಚು ಸೋರೆಕಾಯಿ ಸೇವಿಸುವುದನ್ನು ತಪ್ಪಿಸಬೇಕು.