ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುವುದು ಇದೆ ಕಾರಣಕ್ಕೆ!
Tv9 Kannada Logo

ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುವುದು ಇದೆ ಕಾರಣಕ್ಕೆ!

Pic Credit: gettyimages

By Preeti Bhatt

18 April 2025

ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಇದನ್ನು ನೀವೂ ನೋಡಿರಬಹುದು. ಆದರೆ ಈ ರೀತಿ ಮಾಡುವುದಕ್ಕೆ ಕಾರಣವೇನು?

 ಬಟ್ಟೆಯಲ್ಲಿ ಸುತ್ತಿ ಮಲಗಿಸುವುದು

ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಇದನ್ನು ನೀವೂ ನೋಡಿರಬಹುದು. ಆದರೆ ಈ ರೀತಿ ಮಾಡುವುದಕ್ಕೆ ಕಾರಣವೇನು?

ಕೆಲವರು ಈ ರೀತಿ ಮಾಡುವುದರಿಂದ ಮಕ್ಕಳಿಗೆ ಹಿಂಸೆ  ಆಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಈ ರೀತಿಯ ಅಭ್ಯಾಸ ಮಕ್ಕಳಿಗೆ ಒಳ್ಳೆಯದೋ? ಅಲ್ಲವೋ?

ಈ ಅಭ್ಯಾಸ ಒಳ್ಳೆಯದೋ? ಅಲ್ಲವೋ?

ಕೆಲವರು ಈ ರೀತಿ ಮಾಡುವುದರಿಂದ ಮಕ್ಕಳಿಗೆ ಹಿಂಸೆ  ಆಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಈ ರೀತಿಯ ಅಭ್ಯಾಸ ಮಕ್ಕಳಿಗೆ ಒಳ್ಳೆಯದೋ? ಅಲ್ಲವೋ?

ಸಾಮಾನ್ಯವಾಗಿ ಶಿಶುವಿಗೆ ಸ್ನಾನ ಮಾಡಿಸಿದ ನಂತರ ಮೆತ್ತನೆಯ, ಹಗುರವಾದ ಬಟ್ಟೆಯಿಂದ ಪೂರ್ತಿಯಾಗಿ ಸುತ್ತಿ ಕೈ- ಕಾಲು ಆಡದಂತೆ ಕಟ್ಟುತ್ತಾರೆ.

ಹಗುರವಾದ ಬಟ್ಟೆ

ಸಾಮಾನ್ಯವಾಗಿ ಶಿಶುವಿಗೆ ಸ್ನಾನ ಮಾಡಿಸಿದ ನಂತರ ಮೆತ್ತನೆಯ, ಹಗುರವಾದ ಬಟ್ಟೆಯಿಂದ ಪೂರ್ತಿಯಾಗಿ ಸುತ್ತಿ ಕೈ- ಕಾಲು ಆಡದಂತೆ ಕಟ್ಟುತ್ತಾರೆ.

ಈ ಅಭ್ಯಾಸ ಮಕ್ಕಳಿಗೆ ಕಷ್ಟ

ಈ ರೀತಿಯ ಅಭ್ಯಾಸ ಮಕ್ಕಳಿಗೆ ಕಷ್ಟವಾಗುತ್ತದೆ ಎಂಬುದು ಶುದ್ಧ ಸುಳ್ಳು. ಇದು ಮಕ್ಕಳಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಇನ್ಸ್ಟಾ ಖಾತೆಯಲ್ಲಿ ಮಾಹಿತಿ

ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು gallaryrk ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಆ ಬಗ್ಗೆ ಮಾಹಿತಿ ಇಲ್ಲಿದೆ.

ಸ್ನಾನದ ಬಳಿಕ

ಹಿರಿಯರು ಹುಟ್ಟಿದ ಕಂದಮ್ಮಗಳಿಗೆ ಸ್ನಾನ ಆದ ಬಳಿಕ ಈ ರೀತಿ ಬಟ್ಟೆ ಸುತ್ತಿ ಮಲಗಿಸುವ ಒಂದು ಅಭ್ಯಾಸವನ್ನು ರೂಢಿಸಿಕೊಂಡು ಬಂದಿದ್ದರು.

ನೆತ್ತಿಗೆ ಹೊರಗಿನ ಗಾಳಿ

ಈ ರೀತಿ ಮಾಡುವುದರಿಂದ ಮಗು ಬೆಚ್ಚಗೆ ಇರಲಿ, ನೆತ್ತಿಗೆ ಹೊರಗಿನ ಗಾಳಿ ಹೋಗದಿರಲಿ ಜೊತೆಗೆ ಮಗುವಿನ ಕೈ- ಕಾಲು ಸೊಟ್ಟ ಆಗದೆ ಸರಿಯಾಗಿ ಬೆಳವಣಿಗೆ ಆಗಲಿ ಎಂಬುದಾಗಿತ್ತು.

ವೈಜ್ಞಾನಿಕ ಕಾರಣ

ವೈಜ್ಞಾನಿಕವಾಗಿ ಮಗು ಹೊಟ್ಟೆಯಲ್ಲಿದ್ದಾಗ ಬೆಚ್ಚಗೆ ಒಂದು ಗೂಡಿನಲ್ಲಿದ್ದ ಹಾಗೆಯೆ ಇರುತ್ತದೆ. ಅದು ಒಂದೇ ಸಲ ಹೊರಗಡೆ ಬಂದ ಮೇಲೆ ಅದಕ್ಕೆ ಎಲ್ಲವೂ ಹೊಸದಾಗಿರುತ್ತದೆ.

ಬೆಚ್ಚಿ ಬೀಳುವುದು

ಚಿಕ್ಕ ಚಿಕ್ಕ ಶಬ್ದಗಳಿಗೂ ಬೆಚ್ಚಿಬಿಳಲು ಪ್ರಾರಂಭಿಸುತ್ತದೆ. ಮಲಗಿರುವಾಗ ಕೈ ಕಾಲು ಆಕಡೆ- ಈಕಡೆ ಆದರೂ ಅದಕ್ಕೆ ಎಚ್ಚರವಾಗಬಹುದು. ಅದನ್ನು ತಡೆಯಲು ರೀತಿ ಅಭ್ಯಾಸ ಒಳ್ಳೆಯದು.