ಅತಿಯಾಗಿ ಬಿಸಿ ಮಾಡಿದ ಚಹಾ ಕುಡಿದ್ರೆ ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ

Pic Credit: pinterest

By Sai Nanda

9 September  2025

ಚಹಾ ಸೇವನೆ

ಕೆಲವರಿಗೆ ಚಹಾ ಕುಡಿಯದೇ ಹೋದರೆ ಆ ದಿನವೇ ಪೂರ್ಣವಾಗುವುದಿಲ್ಲ. ಬೆಳಗ್ಗೆ  ಎದ್ದ ತಕ್ಷಣ ಒಂದು ಕಪ್ ಆದರೂ ಚಹಾ ಕುಡಿಯಲೇಬೇಕು.

ಮೈಂಡ್ ರಿಲ್ಯಾಕ್ಸ್

* ಎಷ್ಟೆ ಟೆನ್ಶನ್ ಇದ್ದರೂ ಒಂದು ಕಪ್ ಚಹಾ ಕುಡಿದ್ರೆ ಮೈಂಡ್ ರಿಲ್ಯಾಕ್ಸ್ ಆಗುತ್ತದೆ. ಟೆನ್ಶನ್ ಫ್ರೀ ಆದ ಅನುಭವವಾಗುತ್ತದೆ.

ದಿನಕ್ಕೆ 2-3 ಬಾರಿ ಚಹಾ ಸೇವನೆ

ಕೆಲವರು ದಿನಕ್ಕೆ ಎರಡು ಮೂರು ಹೊತ್ತು ಚಹಾ ಕುಡಿಯುತ್ತಾರೆ. ಆದರೆ ಈ ರೀತಿ ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಆರೋಗ್ಯಕ್ಕೆ ಮಾರಕ

ಅತಿಯಾದ ಚಹಾ ಸೇವನೆಯಿಂದ ಆರೋಗ್ಯದ ಮೇಲೆ ಎಷ್ಟು ಅಡ್ಡ ಪರಿಣಾಗಳು ಇದೆಯೋ, ಅದೇ ರೀತಿ ಹೆಚ್ಚು ಕುದಿಸಿದ ಚಹಾ ಸೇವನೆಯು ಆರೋಗ್ಯಕ್ಕೆ ಮಾರಕ.

ಬಿಸಿ ಮಾಡಿದ ಚಹಾ ಸೇವನೆ

 ಕೆಲವರು ಚಹಾವನ್ನು ಹೆಚ್ಚು ಬಿಸಿ ಮಾಡಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸದಿಂದಲೂ ಈ ಕೆಲವು ಆರೋಗ್ಯ ಸಮಸ್ಯೆಗಳು ಬರುತ್ತದೆ.

ರಕ್ತಹೀನತೆ

ಚಹಾವನ್ನು ಅತಿಯಾಗಿ ಕುದಿಸಿ ಕುಡಿಯುವುದರಿಂದ ಇದರಲ್ಲಿರುವ ಟ್ಯಾನಿನ್ ಅಂಶವು ರಕ್ತಹೀನತೆಗೆ ಕಾರಣವಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ

 ಅತಿಯಾಗಿ ಬಿಸಿ ಮಾಡಿದ ಚಹಾ ಸೇವನೆಯೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಜೀರ್ಣದಂತಹ ಸಮಸ್ಯೆಗಳು ಬರಬಹುದು.

ರಕ್ತದೊತ್ತಡ

ದೀರ್ಘಕಾಲದವೆರೆಗೆ ಬಿಸಿ ಚಹಾ ಸೇವನೆಯಿಂದ ರಕ್ತದೊತ್ತಡದಂತಹ ಸಮಸ್ಯೆಗಳು ಬರುತ್ತದೆ.