Pic Credit: pinterest
By Sai Nanda
15 September 2025
ಹಾಲು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಹೆಚ್ಚಿನವರು ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುತ್ತಾರೆ.
ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ12, ರಂಜಕ, ಪೊಟ್ಯಾಸಿಯಮ್, ಅಯೋಡಿನ್ ಮತ್ತು ನಿಯಾಸಿನ್‌ನಂತಹ ಫೋಷಕಾಂಶಗಳಿವೆ.
ಹಾಲು ಸೇವಿಸುವುದರಿಂದ ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಚರ್ಮ ಆರೋಗ್ಯ ವೃದ್ಧಿಸುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಹೃದಯ, ಮೂತ್ರಪಿಂಡಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಹೃದಯ, ಮೂತ್ರಪಿಂಡಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಪೋಷಕರು ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮುಂಚಿತವಾಗಿ ಮಕ್ಕಳಿಗೆ ಹಾಲು ಕುಡಿಯಲು ಕೊಡುತ್ತಾರೆ. ಇದು ಒಳ್ಳೆಯದು ಎಂದೇ ಪರಿಗಣಿಸಲಾಗಿದೆ.
ಆದರೆ ಮಕ್ಕಳಿಗೆ ರಾತ್ರಿ ಹಾಲು ಕುಡಿಯಲು ಕೊಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಇದಕ್ಕೆ ಕಾರಣವು ಇದೆ.
ಎರಡರಿಂದ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ನೀಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.