ಜ್ವರ ಬಂದಾಗ ಹೆಚ್ಚು ಕಾಫಿ ಕುಡಿಯುವ ಅಭ್ಯಾಸ ಇದ್ರೆ ಇಂದೇ ನಿಲ್ಲಿಸಿ ಬಿಡಿ

Pic Credit: pinterest

By Sai Nanda

10 September  2025

ಹವಾಮಾನ ಬದಲಾವಣೆ

ಇತ್ತೀಚೆಗಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಾದ ಜ್ವರ, ಶೀತ, ಕೆಮ್ಮು ಸರ್ವೇ ಸಾಮಾನ್ಯವಾಗಿದೆ.

ಕಾಫಿ ಟೀ ಸೇವನೆ

ಜ್ವರ ಬಂದಾಗ ಬಾಯಿ ರುಚಿಸುವುದಿಲ್ಲ. ಹೀಗಾಗಿ ಹೆಚ್ಚಿನವರು ಈ ಸಮಯದಲ್ಲಿ ಕಾಫಿ ಟೀಯನ್ನು ಕುಡಿಯಲು ಇಷ್ಟ ಪಡುತ್ತಾರೆ.

ಕಾಫಿ ಸೇವನೆ ತ್ಯಜಿಸಿ

ಕಾಫಿ ಅಥವಾ ಟೀ ಕುಡಿದ್ರೆ ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗುತ್ತದೇನೋ ನಿಜ. ಆದರೆ ಈ ಸಮಯದಲ್ಲಿ ಕಾಫಿ ಕುಡಿಯುವುದನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

ವಿಶ್ರಾಂತಿ ಅಗತ್ಯ

ಜ್ವರ ಬಂದಾಗ ದೇಹವು ಸಹಜವಾಗಿ ಆಯಾಸಗೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿ ಬೇಕು.

ಕೆಫೀನ್ ಅಂಶ ಅಧಿಕ

ಜ್ವರವಿದ್ದಾಗ ಕಾಫಿ ಸೇವನೆ ಮಾಡಿದ್ರೆ ಇದರಲ್ಲಿರುವ ಅಧಿಕ ಕೆಫೀನ್ ಅಂಶವು ದೇಹವನ್ನು ಸದಾ ಎಚ್ಚರವಾಗಿರುವಂತೆ ಮಾಡುತ್ತದೆ.

ನಿರ್ಜಲೀಕರಣ

ಕಾಫಿಯಲ್ಲಿರುವ ಕೆಫೀನ್ ಅಂಶದಿಂದ ನಿದ್ರೆ ಮಾಡಲಾಗುವುದಿಲ್ಲ. ಇದು ದೇಹದಲ್ಲಿ ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಆದರೆ ಆರೋಗ್ಯ ಹದಗೆಟ್ಟಾಗ ನೀರಿನಾಂಶವನ್ನು ಕಾಯ್ದುಕೊಳ್ಳುವುದು ಮುಖ್ಯ.

ಅಧಿಕ ಮೂತ್ರ ವಿಸರ್ಜನೆ

ಕಾಫಿ ಸೇವನೆಯೂ ಅಧಿಕ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಈ ಕಾರಣದಿಂದ ಈ ಸಮಯದಲ್ಲಿ ಕಾಫಿ ಸೇವನೆ ಒಳ್ಳೆಯದಲ್ಲ.

ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ

ಜ್ವರವಿದ್ದಾಗ ವಿಶ್ರಾಂತಿಯೊಂದಿಗೆ ನಿದ್ರೆಯನ್ನು ಉತ್ತೇಜಿಸುವ ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ, ಬೆಚ್ಚಗಿನ ನೀರನ್ನು ಸೇವಿಸಿ.