ಮೊದಲ ಬಾರಿಗೆ ಯೋಗ ಮಾಡುವವರು ಈ ವಿಷಯ ಗಮನಿಸಿ

Pic Credit: pinterest

By Preeti Bhat

21 June 2025

ಯೋಗ

ಯೋಗವನ್ನು ಆರಂಭ ಮಾಡುವ ಮೊದಲು ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಇವು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಖಾಲಿ ಹೊಟ್ಟೆ

ಯೋಗವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿರುವಾಗಲೇ ಮಾಡಬೇಕು. ಬೆಳಿಗ್ಗೆ ಬೇಗನೆ ಯೋಗ ಮಾಡಲು ಸಾಧ್ಯವಾಗದಿದ್ದಾಗ ಊಟ ಮಾಡಿದ ಕನಿಷ್ಠ 3 ಗಂಟೆಗಳ ನಂತರ ಯೋಗ ಮಾಡಬಹುದು.

ಉಪಾಹಾರ

ನೀವು ಬೆಳಗ್ಗಿನ ತಿಂಡಿಯಾದ ಮೇಲೆ ಯೋಗ ಮಾಡುತ್ತೀರಿ ಎಂದಾದರೆ ಉಪಾಹಾರದ ನಂತರ ಕನಿಷ್ಠ 2 ಗಂಟೆಗಳ ಅಂತರವಿಟ್ಟುಕೊಳ್ಳಬೇಕು.

ಭಂಗಿ

ಯೋಗಾಭ್ಯಾಸ ಮಾಡುವಾಗ ಸರಿಯಾದ ಭಂಗಿಯಲ್ಲಿ ಮಾಡಿ. ಯೋಗ ಮಾಡುವುದು ತಪ್ಪಾಗಿದ್ದರೆ, ಅದು ಪ್ರಯೋಜನಗಳನ್ನು ನೀಡುವ ಬದಲು ಹಾನಿಯನ್ನುಂಟುಮಾಡಬಹುದು.

ಅನಾರೋಗ್ಯ

ನೀವು ದೈಹಿಕ ನೋವು ಅಥವಾ ಅನಾರೋಗ್ಯವನ್ನು ನಿವಾರಿಸಲು ಯೋಗ ಮಾಡುತ್ತಿದ್ದರೆ, ತಜ್ಞರೊಂದಿಗೆ ಸಮಾಲೋಚಿಸಿ ಅದಕ್ಕೆ ಸೂಕ್ತವಾಗಿರುವ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ.

ಬಟ್ಟೆ

ಯೋಗ ಮಾಡುವುದಕ್ಕೆ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ. ಅದರಲ್ಲಿಯೂ ವಿಶೇಷವಾಗಿ ಸರಿಯಾದ ಒಳ ಉಡುಪುಗಳನ್ನು ಆರಿಸಿಕೊಳ್ಳುವುದು . ಬಹಳ ಮುಖ್ಯವಾಗುತ್ತದೆ.

ಕಂಫರ್ಟ್

ನಿಮ್ಮ ದೇಹಕ್ಕೆ ಕಂಫರ್ಟ್ ನೀಡುವಂತಹ ಉಡುಗೆಗೆಳನ್ನು ಆಯ್ಕೆ ಮಾಡಿಕೊಳ್ಳಿ, ಆದಷ್ಟು ಅದು ಬಿಗಿಯಾಗಿ ಇರದಂತೆ ನೋಡಿಕೊಳ್ಳಿ.  

ಯೋಗ ಮ್ಯಾಟ್

ಯೋಗ ಮ್ಯಾಟ್ ಜಾರುವಂತೆ ಇರಬಾರದು ಏಕೆಂದರೆ ಯೋಗ ಮಾಡುವಾಗ ಜಾರಿದರೆ ಆರೋಗ್ಯ ಚೆನ್ನಾಗಿರುವುದಕ್ಕಿಂತ ಹಾಳಾಗುವ ಸಂಭವವೇ ಹೆಚ್ಚಾಗಿರುತ್ತದೆ.