Almatti Dam (7)
TV9 Kannada Logo For Webstory First Slide

07 April 2025

Author: Vivek Biradar

ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ

Almatti Dam

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮದ ಬಳಿ ಇರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಉತ್ತರ ಕರ್ನಾಟಕ ಜನರ ಜೀವನಾಡಿಯಾಗಿದೆ.

Basavasagar Dam

ಆಲಮಟ್ಟಿ ಜಲಾಶಯದಿಂದ 12000 ಕ್ಯೂಸೆಕ್ ನೀರನ್ನು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರಕ್ಕೆ ಬಿಡುಗಡೆ ಮಾಡಲಾಗಿದೆ.

Almatti Dam (1)

ಕುಡಿಯವ ಉದ್ದೇಶಕ್ಕೆ 26 ಕ್ರಸ್ಟ್ ಗೇಟ್ ಗಳ ಮೂಲಕ 2 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. 

ಬಸವ ಸಾಗರ ಜಲಾಶಯದ ಆಧಿಕಾರಿಗಳ ಮನವಿ ಮೇರೆಗೆ ನೀರು ಬಿಡಲಾಗುತ್ತಿದೆ ಕೆಬಿಜೆಎನ್ಎಲ್ ಹೇಳಿದರು.

ಆಲಮಟ್ಟಿ ಡ್ಯಾಂನಲ್ಲಿ ಸಂಗ್ರಹವಿರುವ ಬಸವ ಸಾಗರ ಜಲಾಶಯದ ಪಾಲಿನ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪು ಎರೆದಿದ್ದಾನೆ.

ಬಸವ ಸಾಗರ ಜಲಾಶಯದ ನೀರನ್ನು ತಾಂತ್ರಿಕ ಕಾರಣದಿಂದ ಆಲಮಟ್ಟಿ ಡ್ಯಾಂನಲ್ಲಿ ಸಂಗ್ರಹಿಸಿಡಲಾಗಿರುತ್ತದೆ ಎಂದರು.

ಅವಶ್ಯವಿದ್ದಾಗ ಬಸವ ಸಾಗರ ಜಲಾಶಯದ ನೀರನ್ನು ಇಂಡೆಂಟ್ ಹಾಕುವ ಮೂಲಕ ಪಡೆಯುತ್ತಾರೆ. ಇದು ಪ್ರತಿ ವರ್ಷವೂ ನಡೆಯೋ ಪ್ರಕ್ರಿಯೆ ಎಂದು ಮಾಹಿತಿ ನೀಡಿದರು.

ಕುಡಿಯೋ ಉದ್ದೇಶಕ್ಕೆ ಮಾತ್ರ ನೀರು ಬಿಡುಗಡೆ ಮಾಡಲಾಗುತ್ತಿದೆ. ತೆಲಂಗಾಣಕ್ಕೆ ಅಥವಾ ಬೇರೆ ಉದ್ದೇಶಕ್ಕೆ ನೀರು ಬಿಡುತ್ತಿಲ್ಲ ಎಂದು ತಿಳಿಸಿದರು.