Author: Vivek Biradar

30 March 2025

ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಯುಗಾದಿ ಗಿಫ್ಟ್

ಏಪ್ರಿಲ್ 1ರಿಂದ 5ರವರೆಗೆ ಭದ್ರಾ ಡ್ಯಾಂನಿಂದ ನೀರು ಬಿಡಲು ಸರ್ಕಾರ ತೀರ್ಮಾನಿಸಿದೆ.

ಭದ್ರಾ ಡ್ಯಾಂನಿಂದ 2 ಟಿಎಂಸಿ ನೀರು ಬಿಡಲು ತೀರ್ಮಾನಿಸಲಾಗಿದೆ

ತುಂಗಭದ್ರಾ ಕಾಲುವೆಗಳಿಗೆ 5 ದಿನ ನೀರು ಹರಿಸಲು ನಿರ್ಧಾರಿಸಲಾಗಿದೆ.

ಇದರಿಂದ ಕೊಪ್ಪಳ, ರಾಯಚೂರು, ಯಾದಗಿರಿ ಭಾಗದ ಜನರಿಗೆ ಅನುಕೂಲವಾಗಲಿದೆ.

ಬೆಳೆಗಳ ಸಂರಕ್ಷಣೆ, ಕುಡಿಯುವ ನೀರು ಪೂರೈಕೆಗೆ ತೀರ್ಮಾನ ಮಾಡಲಾಗಿದೆ.

ಭದ್ರಾ ಡ್ಯಾಂನಲ್ಲಿ ಸದ್ಯ 28 ಟಿಎಂಸಿ ನೀರು ಇದೆ. ಏ. 6ರಿಂದ ಕಾಲುವೆಗಳನ್ನು ಕುಡಿಯುವ ನೀರು ಸರಬರಾಜಿಗೆ ಮಾತ್ರ ಬಳಕೆ ಮಾಡಲಾಗುತ್ತದೆ.

ಮೇ 8 ರವರೆಗೆ ನೀರಾವರಿಗಾಗಿ 11 ಟಿಎಂಸಿ, ಕುಡಿಯುವ ನೀರಿಗೆ 14 ಟಿಎಂಸಿ ಅಗತ್ಯವಿ. 3 ಟಿಎಂಸಿ ಕುಶನ್ ಉಳಿದಿದೆ.