Author: Vivek Biradar

31 March 2025

ನಾಳೆಯಿಂದ ದುಬಾರಿ ದುನಿಯಾ: ಹಾಲು, ಟೋಲ್ ಸೇರಿದಂತೆ ಹಲವು ಬೆಲೆ ಏರಿಕೆ

ಟೋಲ್ ಗಳಲ್ಲಿ ಶೇ.3ರಿಂದ 5ರಷ್ಟು ದರ ಹೆಚ್ಚಳ

ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ

ಕೆಎಂಎಫ್‌ ನಂದಿನಿ ಹಾಲಿನ ದರವೂ ಏರಿಕೆ

ಪ್ರತಿ ಲೀಟರ್ ಹಾಲಿನ ದರ 5 ರೂ. ಹೆಚ್ಚಾಗಲಿದೆ.

ಹೋಮೋಜಿನೈಸ್ಡ್ ಟೋನ್ಡ್ ಹಾಲು ಒಂದು ಲೀಟರ್ ಈಗಿನ ದರ ₹45-ಹೊಸ ದರ ₹49, ಹೋಮೋಜಿನೈಸ್ಡ್ ಹಸುವಿನ ಹಾಲು ಒಂದು ಲೀಟರ್ ಈಗಿನ ದರ ₹48-ಹೊಸ ದರ ₹52 ಆಗಲಿದೆ.

ಸ್ಪೆಷಲ್ ಹಾಲು ಒಂದು ಲೀಟರ್ ಈಗಿನ ದರ ₹50- ಹೊಸ ದರ ₹54, ಶುಭಂ ಹಾಲು ಒಂದು ಲೀಟರ್ ಈಗಿನ ದರ ₹50- ಹೊಸ ದರ ₹54, ಸಮೃದ್ಧಿ ಹಾಲು ಒಂದು ಲೀಟರ್ ಈಗಿನ ದರ ₹56- ಹೊಸ ದರ ₹60 ಆಗಲಿದೆ.

ಹೊಸ ವಾಹನ ಖರೀದಿಸುವವರಿಗೂ ಶಾಕ್ ಕಾದಿದೆ.

ಹೊಸ ವಾಹನಗಳ ದರ ಹೆಚ್ಚಳಕ್ಕೆ ವಾಹನ ತಯಾರಿಕಾ ಕಂಪನಿಗಳು ಮುಂದಾಗಿವೆ.

ಹೊಸ ಕಾರು ಆಟೋ, ಬೈಕ್ ಖರೀದಿ ಮಾಡಬೇಕು ಅಂದ್ರೆ ಪ್ರತಿ ವಾಹನದ ಮೇಲೆ 3 ರಿಂದ 4 ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ.