Pic Credit: pinterest
By Malashree anchan
20 September 2025
ಹೆಂಡತಿಯ ತಮಾಷೆಯ ಮಾತುಗಳಿಂದ ಗಂಡ ಖುಷಿ ಪಡುತ್ತಾನೆ. ಸಂಭಾಷಣೆ ಪ್ರಾಮಾಣಿಕ, ತಮಾಷೆಯಿಂದ ಕೂಡಿದ್ದರೆ ಇಬ್ಬರ ನಡುವಿನ ಬಾಂಧವ್ಯವೂ ಬಲಗೊಳ್ಳುತ್ತದೆ.
ಪ್ರತಿದಿನ ಗಂಡನೊಂದಿಗೆ ಗುಣಮಟ್ಟದ ಸಮಯವನ್ನು ಹೆಂಡತಿ ಕಳೆಯಬೇಕು. ಇದು ಕೂಡಾ ಪತಿಯನ್ನು ಸಂತೋಷಪಡಿಸುತ್ತದೆ.
ಕೆಲವೊಮ್ಮೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರುತ್ತದೆ. ಅವುಗಳನ್ನು ತಕ್ಷಣ ರಾಜಿ ಮಾಡಿಕೊಳ್ಳಿ. ಇದರಿಂದ ಬಾಂಧವ್ಯವೂ ಬಲಗೊಳ್ಳುತ್ತದೆ.
ನಿಮ್ಮ ಪತಿ ನಿಮಗಾಗಿ ಏನಾದ್ರೂ ಮಾಡಿದರೆ ಅದಕ್ಕೆ ಧನ್ಯವಾದ ತಿಳಿಸಿ. ಧನ್ಯವಾದ ಹೇಳುವುದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ.
ನಿಮ್ಮ ಪತಿಯ ಪ್ರತಿಯೊಂದು ಕೆಲಸಕ್ಕೂ ಪ್ರೋತ್ಸಾಹ ನೀಡಿ, ಅವರಿಗೆ ಬೆಂಬಲ ನೀಡಿ. ಇದರಿಂದ ನಿಮ್ಮಿಬ್ಬರ ಬಂಧವೂ ಬಲಗೊಳ್ಳುತ್ತದೆ.
ನಿಮ್ಮ ಗಂಡನಿಗೆ ನೆಚ್ಚಿನ ಅಡುಗೆಯನ್ನು ಮಾಡಿ ಬಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಗಂಡನ ಸಂತೋಷವು ದ್ವಿಗುಣಗೊಳ್ಳುತ್ತದೆ.
ನಿಮ್ಮ ಗಂಡನಿಗೆ ಉಡುಗೊರೆಗಳನ್ನು ನೀಡಿ. ಹೀಗೆ ಸರ್ಪ್ರೈಸ್ ಉಡುಗೊರೆಗಳನ್ನು ನೀಡುವುದರಿಂದ ಅವರು ಸಂತೋಷಗೊಳ್ಳುತ್ತಾರೆ.
ನಿಮ್ಮ ಗಂಡ ತುಂಬಾ ಚೆನ್ನಾಗಿ ರೆಡಿಯಾದಾಗ ಅವರನ್ನು ಹೊಗಳಿ. ಈ ಹೊಗಳಿಕೆಯ ಮಾತು ನಿಮ್ಮ ಪತಿಗೂ ಸಂತೋಷವನ್ನು ನೀಡುತ್ತದೆ.