ಪುಟ್ಟ ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆದ್ರೆ ಏನಾಗುತ್ತೆ ನೋಡಿ

Pic Credit: pinterest

By Malashree anchan

4 August 2025 

ಗೌರವದ ಭಾವನೆ ಬೆಳೆಯುತ್ತದೆ

ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆದರೆ ಹಿರಿಯರಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಜೀವನ ಪಾಠವನ್ನು ಕಲಿಯುತ್ತಾರೆ.

ಆತ್ಮವಿಶ್ವಾಸ ಹೆಚ್ಚುತ್ತದೆ

ಅಜ್ಜ ಅಜ್ಜಿಯರೊಂದಿಗೆ ಸಮಯ ಕಳೆದಾಗ ಅವರ ಪ್ರೋತ್ಸಾಹದ ಮಾತುಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಭಾವನಾತ್ಮಕ ಬೆಂಬಲ

ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆಯುವ ಮಕ್ಕಳು ಭಾವನಾತ್ಮಕವಾಗಿ ಬಲಶಾಲಿಗಳಾಗಿರುತ್ತಾರೆ.  

ಸಮಸ್ಯೆಗಳನ್ನು ಎದುರಿಸುವ ಕಲೆ

ಅಜ್ಜ-ಅಜ್ಜಿ ಹೇಳುವಂತಹ ಕಥೆಗಳಿಂದ ಅವರು ಕಲಿಸುವ ಜೀವನ ಪಾಠಗಳಿಂದ ಮಕ್ಕಳು ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬುದನ್ನು ಕಲಿಯುತ್ತಾರೆ.

ಮೌಲ್ಯಗಳು ಬೆಳೆಯುತ್ತದೆ

ಅಜ್ಜಿ ತಾತ ನೀತಿ ಕಥೆಗಳು, ಜೀವನ ಪಾಠಗಳನ್ನು ಹೇಳುವ ಮೂಲಕವೇ ಮಕ್ಕಳಲ್ಲಿ  ಉತ್ತಮ ಮೌಲ್ಯಗಳನ್ನು ಬೆಳೆಸುತ್ತಾರೆ. ಅಲ್ಲದೆ ಇದು ಮಕ್ಕಳಲ್ಲಿ ಸಕಾರಾತ್ಮಕತೆಯನ್ನು ಬೆಳೆಸುತ್ತದೆ.

ಒತ್ತಡ ನಿವಾರಣೆ

ಮಕ್ಕಳು ತಮ್ಮ ಅಜ್ಜಿ ತಾತನೊಂದಿಗೆ ಸಮಯ ಕಳೆಯುವುದರಿಂದ ಅವರ ಒತ್ತಡ, ಖಿನ್ನತೆ ಎನ್ನುವಂತಹದ್ದು ದೂರವಾಗುತ್ತದೆ. ಮತ್ತು ಖುಷಿಯಾಗಿರುತ್ತಾರೆ.

ಸಂಸ್ಕೃತಿಯ ಬಗ್ಗೆ ಕಲಿಕೆ

ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಹಿರಿಯರು ಆಚರಿಸಿಕೊಂಡು ಬಂದಂತಹ ಪದ್ಧತಿಗಳು, ಸಂಸ್ಕೃತಿಯ ಬಗ್ಗೆ ಕಲಿಯುತ್ತಾರೆ.

ಸಂಸ್ಕಾರ

ಮುಖ್ಯವಾಗಿ ಮೊಮ್ಮಕ್ಕಳು ಅಜ್ಜ ತಾತನ ಜೊತೆ ಬೆರೆಯುವುದರಿಂದ ಸಂಸ್ಕಾರವನ್ನು ಕಲಿಯುವುದರ ಜೊತೆಗೆ ಸರಿ ದಾರಿಯಲ್ಲಿ ನಡೆಯುವ ಬಗ್ಗೆ ಕಲಿಯುತ್ತಾರೆ.