Pic Credit: pinterest
By Preeti Bhat
23 May 2025
ನವಿಲು ಗರಿಯು ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಜ್ಯೋತಿಷ್ಯದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ನವಿಲು ಗರಿ ಶ್ರೀ ಕೃಷ್ಣನಿಗೆ ಪ್ರಿಯವಾಗಿದೆ. ಆದ್ದರಿಂದ ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಂಡರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಪೂಜಾ ಕೋಣೆಯಲ್ಲಿ ಎರಡು ನವಿಲು ಗರಿಗಳನ್ನು ಒಟ್ಟಿಗೆ ಇಡುವುದರಿಂದ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ.
ಮನೆಯ ಮುಖ್ಯ ದ್ವಾರದಲ್ಲಿ ವಾಸ್ತು ದೋಷವಿದ್ದರೆ, ಬಾಗಿಲಿನ ಚೌಕಟ್ಟಿನಲ್ಲಿ ಕುಳಿತ ಭಂಗಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಅದರ ಮೇಲೆ ಮೂರು ನವಿಲು ಗರಿಗಳನ್ನು ಇರಿಸಿ.
ಶುಕ್ಲ ಪಕ್ಷದ ಸಮಯದಲ್ಲಿ ಆಗ್ನೇಯ ಮೂಲೆಯಲ್ಲಿ ಕನಿಷ್ಠ 5 ಅಡಿ ಎತ್ತರದಲ್ಲಿ ಎರಡು ನವಿಲು ಗರಿಗಳನ್ನು ಇಟ್ಟರೆ ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ.
11, 15 ಅಥವಾ ಅದಕ್ಕಿಂತ ಹೆಚ್ಚು ನವಿಲು ಗರಿಗಳನ್ನು ಮನೆಯ ಡ್ರಾಯಿಂಗ್ ರೂಮ್ ಅಥವಾ ಊಟದ ಕೋಣೆಯಲ್ಲಿ ಒಟ್ಟಿಗೆ ಇಡಿ.
ಈ ರೀತಿ ಮಾಡಿದರೆ ಕುಟುಂಬ ಸದಸ್ಯರ ನಡುವೆ ಪರಸ್ಪರ ಸಾಮರಸ್ಯವನ್ನು ಸುಧಾರಿಸುತ್ತದೆ, ವಾತ್ಸಲ್ಯ ಹೆಚ್ಚಾಗುತ್ತದೆ.
ಮನೆಯ ಸ್ವಚ್ಛತೆ ಕಾಪಾಡಲು ನವಿಲು ಗರಿ ಕೂಡ ಸಹಕಾರಿಯಾಗಿದೆ. ನವಿಲು ಗರಿಗಳನ್ನು ಇಟ್ಟ ಜಾಗದ ಸುತ್ತ ಯಾವುದೇ ಕೀಟಗಳು ಬರುವುದಿಲ್ಲ.