Pic Credit: pinterest
By Malashree Anchan
28 May 2025
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತ ಹೇಳ್ತಾರೆ. ಆದ್ರೂ ಕೂಡ ಕೆಲವೊಂದು ಬಾರಿ ಈ ಜಗಳಗಳು ಅತಿರೇಕಕ್ಕೆ ತಿರುಗಿ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.
ಜಗಳಗಳು ಸಹಜ. ಆದರೆ ಹೆಂಡತಿಯಾದಳಲ್ಲ ಈ ಕೆಲವೊಂದು ಗುಣಗಳಿದ್ದರೆ ದಾಂಪತ್ಯ ಜೀವನ ಎನ್ನುವಂತಹದ್ದು ಸುಖಮಯವಾಗಿರುತ್ತದೆ ಎಂದು ಚಾಣಕ್ಯರು ಹೇಳ್ತಾರೆ.
ಹೆಂಡತಿಯಾದವಳಿಗೆ ತನ್ನ ಗಂಡನನ್ನು ಪ್ರೋತ್ಸಾಹಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.
ಹೆಂಡತಿಯಾದವಳಿಗೆ ತಾಳ್ಮೆ ಇರಬೇಕು. ಹೆಂಡತಿಗೆ ಈ ಗುಣವಿದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಸಂಕೀರ್ಣತೆಗಳನ್ನು ನಿಭಾಯಿಸುವ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಬುದ್ಧಿವಂತ ಹೆಂಡತಿಯಿದ್ದರೆ ದಾಂಪತ್ಯ ಜೀವನ ಸುಂದರವಾಗಿರುತ್ತದೆ.
ಹೆಂಡತಿಯಾದವಳಿಗೆ ಅನಗತ್ಯ ಖರ್ಚು ಮಾಡದೆ ಹಣವನ್ನು ಉಳಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ಹೆಂಡತಿಯಾದವಳಿಗೆ ದಯೆ ಮತ್ತು ಸಹಾನುಭೂತಿ ಗುಣವಿದ್ದರೆ ದಾಂಪತ್ಯ ಜೀವನ ಎನ್ನುವಂತಹದ್ದುಸುಖಮಯವಾಗಿರುತ್ತದೆ.
ಗಂಡ, ಮನೆಯವರಿಗೆ ಗೌರವ ನೀಡುವ ಗುಣವನ್ನು ಹೊಂದಿರಬೇಕು. ಹೆಂಡತಿಯಲ್ಲಿ ಈ ಗುಣವಿದ್ದರೆ ಅಲ್ಲಿ ಜಗಳ ಎನ್ನುವಂತಹದ್ದು ನಡೆಯೋಲ್ಲ.