Pic Credit: pinterest
By Malashree anchan
02 July 2025
ಪತಿ ಪತ್ನಿ ಎಷ್ಟೇ ಕ್ಲೋಸ್ ಆಗಿದ್ರೂ ಕೂಡಾ ಪತ್ನಿ ಒಂದಷ್ಟು ಸೀಕ್ರೆಟ್ ವಿಚಾರಗಳನ್ನು ಯಾವತ್ತಿಗೂ ತನ್ನ ಗಂಡನ ಬಳಿ ಹೇಳಿಕೊಳ್ಳುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.
ಪತಿ ಪತ್ನಿಯರ ಸಂಬಂಧ ತೆರೆದ ಪುಸ್ತಕದಂತಿರಬೇಕು ಹೀಗಿದ್ದರೆ ಮಾತ್ರ ಬಂಧವು ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳುತ್ತಾರೆ.
ಗಂಡ ಹೆಂಡತಿ ನಡುವಿನ ಸಂಬಂಧವು ಪ್ರೀತಿ, ವಿಶ್ವಾಸ ನಂಬಿಕೆಯನ್ನು ಆಧರಿಸಿದೆ. ಹೀಗಿದ್ದರೂ ಹೆಂಡತಿಯಾದವಳು ಕೆಲವು ವಿಚಾರಗಳನ್ನು ಗಂಡನ ಬಳಿ ಹೇಳಿಕೊಳ್ಳುವುದಿಲ್ಲ
ಮದುವೆಗೂ ಮುಂಚೆ ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ಕ್ರಶ್ ಆಗಿದ್ರೆ ಈ ರಹಸ್ಯವನ್ನು ಹೆಂಡತಿ ತನ್ನ ಗಂಡನೊಂದಿಗೆ ಯಾರೊಂದಿಗೂ ಕೂಡಾ ಶೇರ್ ಮಾಡುವುದಿಲ್ಲವಂತೆ.
ಪತಿ ಪತ್ನಿಯ ಬಳಿ ಇಬ್ಬರೂ ಒಟ್ಟಿಗೆ ಕಳೆದ ಆತ್ಮೀಯ ಕ್ಷಣಗಳ ಬಗ್ಗೆ ಕೇಳಿದಾಗ, ಪತ್ನಿ ಅಪೂರ್ಣ ಸತ್ಯವನ್ನು ಮಾತ್ರ ಹೇಳುತ್ತಾಳೆ ಎಂದು ಚಾಣಕ್ಯ ಹೇಳುತ್ತಾರೆ.
ಹೆಂಡತಿ ಉಳಿತಾಯದ ಬಗ್ಗೆ ತನ್ನ ಪತಿಯೊಂದಿಗೂ ಕೂಡಾ ಹೇಳುವುದಿಲ್ಲ. ಪತಿ ಅಥವಾ ಕುಟುಂಬ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ಈ ಹಣವನ್ನು ಆಕೆ ಉಪಯೋಗಿಸುತ್ತಾಳೆ.
ಮಹಿಳೆಯರು ತಮ್ಮ ಅನಾರೋಗ್ಯವನ್ನು ಗಂಡಂದಿರಿಂದ ಮರೆಮಾಡುತ್ತಾರೆ. ಅನಗತ್ಯವಾಗಿ ನಮ್ಮಿಂದ ಗಂಡನಿಗೆ ತೊಂದರೆ ಆಗುತ್ತೋ ಎಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ.
ಹೆಂಡತಿ ಯಾವಾಗಲೂ ತನ್ನ ಆಸೆಗಳನ್ನು ಗಂಡನಿಂದ ಮರೆಮಾಡುತ್ತಾಳೆ. ಅವಳು ತನ್ನ ಗಂಡನ ಇಚ್ಛೆಯಂತೆ ಬದುಕಲು ಇಷ್ಟಪಡುತ್ತಾಳೆ ಎಂದು ಚಾಣಕ್ಯ ಹೇಳುತ್ತಾರೆ.