ಚಾಣಕ್ಯರ ಪ್ರಕಾರ ಹೆಂಡತಿ ಹೀಗಿದ್ದರೆ ಗಂಡನ ಬದುಕೇ ನರಕ

Pic Credit: pinterest

By Malashree Anchan

21 May 2025

ಹೆಂಡತಿಯ ಗುಣ

ಚಾಣಕ್ಯರು ಹೆಂಡತಿಯ ಯಾವ ಅಭ್ಯಾಸಗಳು ಗಂಡನ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬುದನ್ನು ಹೇಳಿದ್ದಾರೆ.

ಅನುಮಾನ

ಅನುಮಾನವೆಂಬ ಭೂತ ಗಂಡ ಹೆಂಡತಿಯ ಸಂಬಂಧವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಅತಿಯಾದ ಖರ್ಚು

 ಹೆಂಡತಿಯ ಅತಿಯಾಗಿ ಖರ್ಚು ಮಾಡುವ ಅಭ್ಯಾಸ ಕೆಲವೊಂದು ಬಾರಿ ಗಂಡನನ್ನು ಸಾಲದಲ್ಲಿ ಸಿಲುಕಿಸಬಹುದು.

ಅಹಂಕಾರ

ತಾನೇ ಶ್ರೇಷ್ಠ, ಎಲ್ಲವೂ ನನ್ನಿಂದಲೇ ಎನ್ನುತ್ತಾ, ಗಂಡನಿಗೆ ಮರ್ಯಾದೆ ಕೊಡದೆ ಅಹಂಕಾರದಿಂದ ವರ್ತಿಸುವ ಹೆಣ್ಣಿನಿಂದ ದಾಂಪತ್ಯ ಜೀವನ ಹಾಳಾಗುತ್ತದೆ.

ಅಸಭ್ಯ ಪದ ಬಳಕೆ 

ಚಾಣಕ್ಯಪ್ರಕಾರ, ಕಠಿಣ ಮಾತುಗಳನ್ನಾಡುವ, ಗಂಡನ ಮೇಲೆ ಅಸಭ್ಯ ಪದ ಬಳಕೆ ಮಾಡುವ ಹೆಂಡತಿಯಿದ್ದರೆ, ಗಂಡನ ಜೀವನ ನರಕಕ್ಕೆ ಸಮಾನವಾಗಿರುತ್ತಂತೆ.

ಸೋಮಾರಿತನ

ಕೆಲವು ಮಹಿಳೆಯರು ತುಂಬಾನೇ ಸೋಮಾರಿಗಳಾಗಿರುತ್ತಾರೆ. ಹೆಂಡತಿಯ ಈ ಅಭ್ಯಾಸವು ಗಂಡನಿಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಮಾರಕ ಎನ್ನುತ್ತಾರೆ ಚಾಣಕ್ಯ.

ಕೋಪ

ಚಾಣಕ್ಯರ ಪ್ರಕಾರ ಪ್ರತಿಯೊಂದು ವಿಷಯಕ್ಕೂ ಗಂಡನ ಮೇಲೆ ಕೋಪ ಮಾಡಿಕೊಳ್ಳುವ ಹೆಂಡತಿಯಿದ್ದರೆ, ಆ ಗಂಡನ ಜೀವನ ನರಕದಂತಿರುತ್ತಂತೆ.

ಸುಳ್ಳು:

ಹೆಂಡತಿಯಾದವಳು ಗಂಡನ ಬಳಿ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳಿದರೆ ನಂತರ ಇದು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ.