Pic Credit: pinterest
By Malashree Anchan
5 june 2025
ಚಾಣಕ್ಯರು ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಜೊತೆಗೆ ಹೆಂಡ್ತಿಯ ಯಾವ ಗುಣ ಗಂಡನಿಗೆ ಇಷ್ಟವಾಗಲ್ಲ ಎಂಬುದನ್ನು ಸಹ ಹೇಳಿದ್ದಾರೆ.
ಹೆಂಡತಿ ಪರ ಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾದರೆ, ಗಂಡನಾದವನು ಆಕೆಗೆ ವಿಚ್ಛೇದನ ಕೊಡಬಹುದು
ತನ್ನ ತಂದೆ-ತಾಯಿ, ಮನೆಯವರಿಗೆ ಹೆಂಡತಿ ಗೌರವ ಕೊಡದೆ ಉಡಾಫೆಯಿಂದ ವರ್ತಿಸಿದರೆ ಇದು ಗಂಡನಿಗೆ ಇಷ್ಟವಾಗಲ್ಲ. ಇದರಿಂದ ಸಂಬಂಧಲ್ಲಿ ಬಿರುಕು ಮೂಡಬಹುದು.
ಹೆಂಡತಿಯಾದವಳು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದಿರುವುದು ಕೂಡಾ ಗಂಡನಿಗೆ ಇಷ್ಟವಾಗಲ್ಲ.
ಹೆಂಡತಿಯ ಪದೇ ಪದೇ ಜಗಳವಾಡುವ ಸ್ವಾಭಾವ ಗಂಡನಿಗೆ ಇಷ್ಟವಾಗಲ್ಲ. ಇದರಿಂದ ಆತ ಆಕೆಗೆ ಡಿವೋರ್ಸ್ ಕೊಡುವ ಸಾಧ್ಯತೆಯೂ ಇರುತ್ತದೆ.
ಹೆಂಡತಿಯಾದವಳಿಗೆ ಕೆಲವು ಪ್ರಮುಖ ಜವಾಬ್ದಾರಿಗಳಿಗೆ. ಅದನ್ನು ಸರಿಯಾಗಿ ನಿರ್ವಹಿಸದೆ, ಸೋಮಾರಿತನವನ್ನು ತೋರಿಸಿದರೂ ಅದು ಗಂಡನಿಗೆ ಕೋಪ ತರಿಸುತ್ತದೆ.
ಹೆಂಡತಿಯಾದವಳು ತನ್ನ ಗಂಡನಿಗೆ ಗೌರವ ಕೊಡದೆ ಎದುರು ಮಾತನಾಡುವ ಅಭ್ಯಾಸವನ್ನು ಹೊಂದಿದ್ದರೆ, ಇದರಿಂದಲೂ ಗಂಡ ಆಕೆಯನ್ನು ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ.
ಹೆಂಡತಿಗೆ ಸುಳ್ಳು ಹೇಳುವ ಅಭ್ಯಾಸವಿದ್ದರೆ, ಇದು ಗಂಡನಿಗೆ ಖಂಡಿತವಾಗಿಯೂ ಇಷ್ಟವಾಗುವುದಿಲ್ಲ. ಇದರಿಂದ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.