22 Nov 2025

Pic credit - Pintrest

Author: Akshay Pallamjalu 

ಇಂತಹ ಜನರ ಸಹವಾಸದಿಂದ ದೂರವಿರಿ

ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಒಂದಷ್ಟು ಜನರ ಸಹವಾಸ ಎಂದಿಗೂ ಒಳ್ಳೆಯದಲ್ಲ ಎಂದಿದ್ದಾರೆ.

ಆಚಾರ್ಯ ಚಾಣಕ್ಯ

Pic credit - Pintrest

ದೊಡ್ಡ ಭರವಸೆಗಳನ್ನು ನೀಡಿ, ಸಮಯ ಬಂದಾಗ ಆ ಭರವಸೆಗಳನ್ನು ನೆರವೇರಿಸದೆ  ದೂರ ಸರಿಯುವ, ನಿಮ್ಮ ಬೆಂಬಲಕ್ಕೆ ನಿಲ್ಲದ ಜನರ ಸಹವಾಸ ಒಳ್ಳೆಯದಲ್ಲ.

ಮಾತಿಗೆ ನಿಲ್ಲದ ಜನರು

Pic credit - Pintrest

ಎಲ್ಲದರ ಬಗ್ಗೆಯೂ ಸುಳ್ಳು ಹೇಳುವ ಜನರೊಂದಿಗೆ ಇರುವುದು ಒಳ್ಳೆಯದಲ್ಲ. ಅಂತಹ ವ್ಯಕ್ತಿಗಳು ನಿಮಗೆ ಗಂಭೀರ ತೊಂದರೆ ಉಂಟುಮಾಡಬಹುದು.

ಸುಳ್ಳುಗಾರು

Pic credit - Pintrest

ನಿಮ್ಮ ಮುಂದೆ ಒಳ್ಳೆಯವನಾಗಿ ವರ್ತಿಸುವ ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನ ಹಾವಿಗಿಂತಲೂ ತುಂಬಾನೇ ವಿಷಕಾರಿ ಎಂದು ಚಾಣಕ್ಯರು ಹೇಳುತ್ತಾರೆ.

ಒಳ್ಳೆತನದ ಮುಖವಾಡ

Pic credit - Pintrest

ನಿಮ್ಮನ್ನು ಪದೇ ಪದೇ ಅವಮಾನಿಸುವ, ನೋಯಿಸುವ ಜನರಿಂದ ದೂರವಿರಿ. ಏಕೆಂದರೆ ಇವರು ಆತ್ಮವಿಶ್ವಾಸವನ್ನು ಕುಗ್ಗಿಸುವುದಲ್ಲದೆ, ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಸೃಷ್ಟಿಸುತ್ತಾರೆ.

ಅವಮಾನಿಸುವವರು

Pic credit - Pintrest

ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ದ್ವೇಷದ ಭಾವನೆಗಳನ್ನು ಹೊಂದಿರುವ ನಕಾರಾತ್ಮಕ ಜನರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ.

ನಕಾರಾತ್ಮಕ ಜನರು

Pic credit - Pintrest

ನಿಮ್ಮ ಏಳಿಗೆಯ ಬಗ್ಗೆ ಅಸೂಯೆಪಡುವ, ಕೊಂಕು ಮಾತುಗಳನ್ನಾಡುವ ಜನರಿಂದ ಆದಷ್ಟು ದೂರವಿರಿ. ಏಕೆಂದರೆ ಅವರಿಂದ ನಿಮಗೆ ತೊಂದರೆಯೇ ಹೆಚ್ಚು.

ಅಸೂಯೆಪಡುವವರು

Pic credit - Pintrest

ಕಾನೂನಿನ ಭಯವಿಲ್ಲದ, ದುಷ್ಟ ಜನರಿಂದ ದೂರವಿರಿ, ಏಕೆಂದರೆ ಇಂತಹವರ ಸಹವಾಸ ನಿಮಗೆ ಹೊರೆಯಾಗಬಹುದು, ಅಂತಹವರಿಂದ ನಿಮಗೂ ಕೆಟ್ಟ ಹೆಸರು ಬರಬಹುದು.

ದುಷ್ಟ ಸ್ವಭಾವ

Pic credit - Pintrest