ನೀವು ಮಾಡುವ ಈ ತಪ್ಪುಗಳೇ ಸಂಬಂಧ ಹಾಳಾಗಲು ಕಾರಣ

Pic Credit: pinterest

By Malashree anchan

12 July 2025

ಚಾಣಕ್ಯ ನೀತಿ

ಸುಂದರ ಸಂಬಂಧ ಹಾಳಾಗಲು ಮುಖ್ಯ ಕಾರಣವೇ ನಾವು ಮಾಡುವ ಈ ಒಂದಿಷ್ಟು ತಪ್ಪುಗಳಂತೆ. ಈ ಬಗ್ಗೆ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ  ತಿಳಿಸಿದ್ದಾರೆ.

ತಪ್ಪು ಹುಡುಕುವುದು

ನೀವು ಯಾವಾಗಲೂ ನಿಮ್ಮ ಸಂಗಾತಿಯಲ್ಲಿ ತಪ್ಪುಗಳನ್ನೇ ಹುಡುಕುತ್ತಿದ್ದರೆ, ಅನುಮಾನಿಸುತ್ತಿದ್ದರೆ ಇದರಿಂದ ಸಂಬಂಧ ಎನ್ನುವಂತಹದ್ದು ದುರ್ಬಲಗೊಳ್ಳುತ್ತದೆ.

ಕೋಪ ಮಾಡಿಕೊಳ್ಳುವುದು

ಕೋಪ ನಮ್ಮ ದೊಡ್ಡ ಶತ್ರು ಎಂದು ಚಾಣಕ್ಯ ಹೇಳಿದ್ದಾರೆ.ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಸಂಬಂಧವೇ ಮುರಿದು ಬೀಳಬಹುದು.

ಅತಿಯಾದ ನಿರೀಕ್ಷೆ

ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹ ಸಂಬಂಧ ಮುರಿದು ಬೀಳಲು ಒಂದು ಪ್ರಮುಖ ಕಾರಣವಂತೆ. ಸಂಬಂಧದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವೇ ಅತೀ ದೊಡ್ಡ ತಪ್ಪು.

ಸುಳ್ಳು ಹೇಳುವುದು

ಪ್ರೀತಿ ಎನ್ನುವಂತಹದ್ದು ನಿಂತಿರುವುದೇ ನಂಬಿಕೆ, ವಿಶ್ವಾಸದ ಮೇಲೆ. ಹೀಗಿರುವಾಗ ನೀವು ಸಂಗಾತಿಗೆ ಸುಳ್ಳು ಹೇಳಿದರೆ ಮುಂದೊಂದು ದಿನ ಇದರಿಂದ ಸಂಬಂಧ ಹಾಳಾಗುತ್ತದೆ.  

ಅನುಮಾನ

ಸಂಗಾತಿಯನ್ನು ಅನುಮಾನಿಸುವುದು ಕೂಡಾ ಸಂಬಂಧ ಹಾಳಾಗಲು ಮುಖ್ಯ ಕಾರಣ. ಸಂಬಂಧದಲ್ಲಿ ನಂಬಿಕೆ ಎನ್ನುವುದು ತುಂಬಾನೇ ಮುಖ್ಯ.

ಅಹಂಕಾರ

ದಾಂಪತ್ಯ, ಪ್ರೇಮ ಸಂಬಂಧದ ನಡುವೆ ಅಹಂಕಾರ ಬಂದರೆ, ಮುಂದೊಂದು ದಿನ ಇದರರಿಂದ ಸುಂದರ ಸಂಬಂಧವೇ ಹಾಳಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಗೌರವ ನೀಡದಿರುವುದು

ನೀವು ನಿಮ್ಮ ಸಂಗಾತಿಗೆ ಎಲ್ಲರ ಮುಂದೆ ಅವಮಾನಿಸಿದರೆ, ಅವರಿಗೆ ಗೌರವ ನೀಡದೆ ನೋವನ್ನು ಉಂಟು ಮಾಡಿದರೆ ಇದರಿಂದಲೂ ಸಂಬಂಧ ಹಾಳಾಗುತ್ತದೆ.