ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಈ ಗುಣಗಳನ್ನು ತ್ಯಜಿಸಿ

Pic Credit: pinterest

By Malashree Anchan

16 May 2025

ಯಶಸ್ಸು 

ಮಹಾನ್‌ ವಿದ್ವಾಂಸರಾದ  ಚಾಣಕ್ಯರು ಯಾರೇ ಆದರೂ ಸರಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಒಂದಷ್ಟು ಗುಣಗಳನ್ನು ತ್ಯಜಿಸಲೇಬೇಕು ಎಂದಿದ್ದಾರೆ.

ಸಹವಾಸ

ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದಾದರೆ ಮೊದಲಿಗೆ ಕೆಟ್ಟವರ ಸಹವಾಸ ಬಿಟ್ಟು, ಒಳ್ಳೆಯ ದಾರಿಯಲ್ಲಿ ನಡೆಯಬೇಕು.

ದುರಾಸೆ

ದುರಾಸೆ ಮನುಷ್ಯ ದೊಡ್ಡ ಶತ್ರು. ಈ ಗುಣವನ್ನು ತ್ಯಜಿಸಿ ಪ್ರಮಾಣಿಕತೆಯಿಂದ ಮುನ್ನಡೆದರೆ ಯಶಸ್ಸು ಖಂಡಿತ ಎನ್ನುತ್ತಾರೆ ಚಾಣಕ್ಯ.

ಕೋಪ

ಯಶಸ್ಸು ಗಳಿಸಬೇಕಾದರೆ ಕೋಪವೆಂಬ ನಿಮ್ಮೊಳಗಿನ ಶತ್ರವನ್ನು ಮೊದಲು ತ್ಯಜಿಸಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.

ನಕಾರಾತ್ಮಕತೆ

ಚಾಣಕ್ಯರ ಪ್ರಕಾರ ನಕಾರಾತ್ಮಕ ಆಲೋಚನೆಗಳನ್ನು ತ್ಯಜಿಸಿದರೆ ಒಬ್ಬ ವ್ಯಕ್ತಿಯೂ ಯಶಸ್ಸು ಸಾಧಿಸಬಹುದಂತೆ.

ಸೋಮಾರಿತನ

ಸೋಮಾರಿತನ ಮನುಷ್ಯನ ದೊಡ್ಡ ಶತ್ರು. ಹಾಗಾಗಿ ಈ ಗುಣವನ್ನು ತ್ಯಜಿಸಿದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ.

ಹೆದರಿಕೆ

ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವೈಫಲ್ಯಗಳಿಗೆ ಹೆದರುವ ಗುಣವನ್ನು ಬಿಟ್ಟುಬಿಡಲೇಬೇಕು ಎನ್ನುತ್ತಾರೆ ಚಾಣಕ್ಯ.

ಅಹಂಕಾರ

ನಿಮ್ಮ ಅಹಂಕಾರವೇ ನಿಮ್ಮ ಯಶಸ್ಸಿಗೆ ತೊಡಕಾಗಬಹುದು. ಆದ್ದರಿಂದ ಈ ಗುಣವನ್ನು ತ್ಯಜಿಸಿ, ವಿನಮ್ರರಾಗಿರಲು ಕಲಿಯಿರಿ.