Pic credit - pinterest

Author: Sai Nanda

30 March 2025

ಕೆಲಸದಲ್ಲಿ ಬಡ್ತಿ ಹೊಂದಲು ಚಾಣಕ್ಯ ನೀಡುವ ಸಲಹೆಗಳೇನು?

ಈಗಿನ ಕಾಲದಲ್ಲಿ ಗಂಡಿರಲಿ, ಹೆಣ್ಣಿರಲಿ ಕೈಯಲ್ಲಿ ಒಂದು ಉದ್ಯೋಗವಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಗಂಡುಮಕ್ಕಳು ಮಾತ್ರವಲ್ಲದೇ ಹೆಣ್ಣು ಮಕ್ಕಳು ಕೂಡ ಉದ್ಯೋಗಕ್ಕೆ ತೆರಳಿ ಕುಟುಂಬ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

ಆದರೆ, ಉದ್ಯೋಗದಲ್ಲಿ ಒಳ್ಳೆಯ ಹೆಸರು ಗಳಿಸುವುದು ಹಾಗೂ ಬೇಗನೇ ಬಡ್ತಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ.

ಆಚಾರ್ಯ ಚಾಣಕ್ಯ ನೀಡಿರುವ ಈ ಕೆಲವು ಸಲಹೆಗಳನ್ನು ಪಾಲಿಸಿದ್ರೆ ಬಡ್ತಿ ಪಡೆಯಲು ಸಾಧ್ಯ.

ಚಾಣಕ್ಯ ಹೇಳುವಂತೆ ಕೆಲಸದ ಸ್ಥಳದಲ್ಲಿ ಪ್ರಾಮಾಣಿಕರಾಗಿರುವುದು ತುಂಬಾನೇ ಒಳ್ಳೆಯದು. ಇದರಿಂದ ಎಲ್ಲರ ನಂಬಿಕೆ ಉಳಿಸಿಕೊಳ್ಳಬಹುದು.

ಕೆಲಸದ ಸ್ಥಳದಲ್ಲಿ ಯಾವುದೇ ಭಯ ಪಡಬಾರದು. ಉದ್ಯೋಗಕ್ಕೆ ಸೇರಿದ ಬಳಿಕ  ಕಷ್ಟ ಎಂದು ಅರ್ಧದಲ್ಲೇ ಉದ್ಯೋಗ ತ್ಯಜಿಸಬಾರದು.

ತಾವು ಮಾಡುವ ಕೆಲಸದ ಮೇಲೆ ಶ್ರದ್ಧೆ ಇರಬೇಕು. ತಪ್ಪು ಮಾಡಿದರೆ ಕ್ಷಮೆ ಕೇಳುವ ಗುಣವನ್ನು ಬೆಳೆಸಿಕೊಂಡಿರಬೇಕು.

ಯಾರಿಗೂ ಕೆಡುಕನ್ನು ಬಯಸದೆ, ಸ್ವಾರ್ಥಿಯಾಗದೇ ಎಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಗುಣವಿರಲಿ ಎನ್ನುತ್ತಾರೆ ಚಾಣಕ್ಯ.

ಚಾಣಕ್ಯ ಹೇಳುವಂತೆ ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಯೂ ಬಡ್ತಿ ಗಳಿಸಲು ಸಾಧ್ಯ.