24 Nov 2025

Pic credit - Pintrest

Author: Akshay Pallamjalu 

ಇಂತಹ ಜನರಿಂದ ದೂರವಿದ್ದಷ್ಟು ಒಳ್ಳೆಯದು

ಕೆಟ್ಟ ಸಹವಾಸದಿಂದ ನಮ್ಮ ವ್ಯಕ್ತಿತ್ವವೇ ಕೆಟ್ಟು ಹೋಗುತ್ತದೆ. ಅದರಲ್ಲೂ ಇಂತಹ ಜನರ ಜೊತೆ ಇದ್ರೆ ನೀವು ಜೀವನದಲ್ಲಿ ಉದ್ಧಾರ ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

ಆಚಾರ್ಯ ಚಾಣಕ್ಯರು

Pic credit - Pintrest

ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರು ನಿಮ್ಮ ಆತ್ಮವಿಶ್ವಾಸವನ್ನು ದುರ್ಬಲಗೊಳಿಸುತ್ತಾರೆ. ಆದ್ದರಿಂದ ನೀವು ಅಂತಹ ಜನರಿಂದ ದೂರವಿರಬೇಕು.

ನಕಾರಾತ್ಮಕ ಜನ

Pic credit - Pintrest

ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕುತ್ತಾ ನಿಮ್ಮನ್ನು ಕುಗ್ಗಿಸುವ, ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸುವ ಜನರ ಸಹವಾಸದಿಂದ ದೂರವಿರಿ.

ತಪ್ಪು ಹುಡುಕುವವರು

Pic credit - Pintrest

ಸೋಮಾರಿಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಅಂತಹ ಜನರು ಜೀವನದಲ್ಲಿ ಸ್ವತಃ ಯಶಸ್ವಿಯಾಗುವುದಿಲ್ಲ ಜೊತೆಗೆ ನಿಮ್ಮನ್ನೂ ಉದ್ಧಾರವಾಗಲು ಬಿಡುವುದಿಲ್ಲ.

ಸೋಮಾರಿಗಳು

Pic credit - Pintrest

ಇತರರ ಪ್ರಗತಿಯನ್ನು ನೋಡಿ ಅಸೂಯೆ ಪಡುವ ಜನರಿಂದ ದೂರವಿರಿ. ಇಂತಹ ಜನರು ನಿಮ್ಮ ಜೀವನದಲ್ಲೂ ಇದ್ದರೆ, ಅವರು ಯಾವಾಗಲೂ ನಿಮ್ಮ ಯಶಸ್ಸಿಗೆ ತಡೆಯಾಗುತ್ತಾರೆ.

ಅಸೂಯೆ ಪಡುವವರು

Pic credit - Pintrest

ನೀವು ಜೀವನದಲ್ಲಿ ಉದ್ಧಾರವಾಗಬೇಕಾದರೆ ನಿಮಗೆ ದ್ರೋಹ ಮಾಡುವ ಅಥವಾ ವಿಶ್ವಾಸಘಾತುಕರಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ.    

ನಂಬಿಕೆ ದ್ರೋಹಿಗಳು

Pic credit - Pintrest

ಸ್ವಾರ್ಥ ಮನೋಭಾವದ ಜನರಿಂದ ದೂರವಿರಿ. ಅಂತಹ ಜನರು ತಮ್ಮ ಅಗತ್ಯಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ಕೊನೆಗೆ ನಿಮಗೆಯೇ ದ್ರೋಹ ಬಗೆಯುತ್ತಾರೆ.

ಸ್ವಾರ್ಥಿಗಳು

Pic credit - Pintrest

ನಿಮ್ಮ ಬೆನ್ನ ಹಿಂದೆ ಮಾತಾಡುವ ಜನರಿಂದ ಸಾಧ್ಯವಾದಷ್ಟು ದೂರವಿರಿ. ಏಕೆಂದರೆ ಅವರು ಏಳ್ಗೆಗೆ ಸದಾ ತೊಡಕಾಗುತ್ತಾರೆ.

ಹಿಂದೆ ಮಾತಾಡುವವರು

Pic credit - Pintrest