ದೇಹದ ಈ ಭಾಗಗಳನ್ನು ಸ್ನಾನದ ಸಮಯದಲ್ಲಿ ಸ್ವಚ್ಛಗೊಳಿಸಿ

Pic Credit: pinterest

By Malashree anchan

23 July 2025

ಕಂಕುಳ

ಕಂಕುಳ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಬೆವರು ಸಂಗ್ರಹವಾಗಿ ಕೆಟ್ಟ ವಾಸನೆ ಉಂಟಾಗುವುದಲ್ಲದೆ, ಸೋಂಕುಗಳು ಉಂಟಾಗಲು ಕಾರಣವಾಗುತ್ತದೆ.

ತೊಡೆಯ ಭಾಗ

ತೊಡೆ ಭಾಗದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ದೇಹದ ಈ ಭಾಗವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ತುರಿಕೆ, ಅಲರ್ಜಿಯ ಸಮಸ್ಯೆ  ಉಂಟಾಗಲು ಕಾರಣವಾಗಬಹುದು.

ಮೊಣಕೈ, ಮೊಣಕಾಲು

ಮೊಣಕೈ, ಮೊಣಕಾಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಭಾಗದ ಚರ್ಮವು ಒಣಗಿ, ಒರಟಾಗಬಹದು ಮಾತ್ರವಲ್ಲದೆ ಇದು ಚರ್ಮ ಕಪ್ಪಾಗಲು ಕಾರಣವಾಗುತ್ತದೆ.  

ಪಾದಗಳು

ಪಾದ ಧೂಳು, ಕೊಳಕು, ಕೊಳೆಗೆ ಒಡ್ಡಿಕೊಳ್ಳುತ್ತವೆ. ಇದರಿಂದ ಸೋಂಕು ಉಂಟಾಗುವುದರ ಜೊತೆಗೆ  ದುರ್ವಾಸನೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪಾದವನ್ನು ತಪ್ಪದೆ ಸ್ವಚ್ಛಗೊಳಿಸಿ.

ಹೊಕ್ಕುಳ

ಹೊಕ್ಕುಳ ದೇಹದ ಪ್ರಮುಖ ಭಾಗವಾಗಿದೆ. ಇಲ್ಲಿಯೂ ಬಹಳಷ್ಟು ಬ್ಯಾಕ್ಟೀರಿಯಾಗಳು ವಾಸಿಸುವ ಕಾರಣದಿಂದ ಈ ಸೂಕ್ಷ್ಮ ಭಾಗವನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ.

ಬೆನ್ನು

ಬೆನ್ನನ್ನು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ಏಕೆಂದರೆ ಬೆನ್ನಿನ ಮೇಲೆ ಸಂಗ್ರಹವಾಗಿವ  ಕೊಳೆಯು ಚರ್ಮದ ಅಲರ್ಜಿ, ಚರ್ಮ ರೋಗಗಳಿಗೆ ಕಾರಣವಾಗಬಹುದು.

ಕುತ್ತಿಗೆಯ ಸ್ವಚ್ಛತ

ಸ್ನಾನ ಮಾಡುವಾಗ, ನಾವು ಕುತ್ತಿಗೆಯ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ಕುತ್ತಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಚರ್ಮಕ್ಕೆ ಸಂಬಂಧಿಸಿದ ಅಲರ್ಜಿಗಳು ಉಂಟಾಗಬಹುದು.

ಕುತ್ತಿಗೆಯ ಸ್ವಚ್ಛತ

ಕಿವಿಗಳ ಶುಚಿಗೊಳಿಸುವಿಕೆ ಕೂಡ ಬಹಳ ಮುಖ್ಯ., ಏಕೆಂದರೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಕಿವಿಯೊಳಗೆ ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ.