Pic Credit: pinterest
By Preeti Bhat
4 September 2025
ಕಾಫಿ ಬದಲು ಬೆಳಗ್ಗೆ ಗ್ರೀನ್ ಟೀ ಕುಡಿಯುವುದು ಉತ್ತಮ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಇದು ದೇಹಕ್ಕೆ ಶಕ್ತಿ ಮತ್ತು ತಾಜಾತನವನ್ನು ನೀಡಲು ಸಹಾಯ ಮಾಡುತ್ತದೆ.
ಬೆಳಗ್ಗೆ ಅರಿಶಿನ ಹಾಲು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಗೊಳ್ಳುತ್ತದೆ ಮತ್ತು ಇದು ದಿನವಿಡೀ ನಿಮಗೆ ಶಕ್ತಿಯನ್ನು ನೀಡುತ್ತದೆ.
ಪುದೀನ, ಕ್ಯಾಮೊಮೈಲ್, ಶುಂಠಿ, ತುಳಸಿ ಮುಂತಾದ ಗಿಡಮೂಲಿಕೆ ಚಹಾ ಕೆಫೀನ್ ಮುಕ್ತವಾಗಿದ್ದು, ಇದರ ಸೇವನೆಯು ದೇಹಕ್ಕೆ ಶಾಂತಿ ಮತ್ತು ತಾಜಾತನವನ್ನು ನೀಡುತ್ತದೆ.
ದಿನವಿಡೀ ಉಲ್ಲಾಸದಿಂದಿರಲು, ನೀವು ಚಹಾದ ಬದಲು ಎಳನೀರನ್ನು ಕುಡಿಯಬಹುದು. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುವಲ್ಲಿಯೂ ಸಹಕಾರಿಯಾಗಿದೆ.
ಇದನ್ನು ಕುಡಿಯುವುದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿರುತ್ತದೆ.
ಜೀರಿಗೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಬಿಸಿ ಮಾಡಿ ಕುಡಿಯಿರಿ. ಇದು ಹೊಟ್ಟೆ ಉಬ್ಬರ ಸಮಸ್ಯೆಗಳನ್ನು ನಿವಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ನೀವು ಚಹಾದ ಬದಲು ಬೆಳಗ್ಗೆ ಮೆಂತ್ಯ ನೀರು ಕುಡಿಯಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ತೂಕ ಇಳಿಕೆಗೆ ಸಹಕಾರಿ.