ಅಳೋದ್ರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

Pic Credit: pinterest

By Malashree Anchan

26 May 2025

ಅಳು

ಕೆಲವರು ಕೋಪ, ದುಃಖ, ಹತಾಶೆಯ ಭಾವನೆಗಳು ಉಂಟಾದಾಗ ಜೋರಾಗಿ ಅಳುತ್ತಾರೆ.

ಆರೋಗ್ಯಕ್ಕೆ ಒಳ್ಳೆಯದು

ಹೀಗೆ ಅಳುವುದನ್ನು ದೌರ್ಬಲ್ಯದ ಸಂಕೇತ ಅಂತ ಹೇಳ್ತಾರೆ. ಆದ್ರೆ ನಿಮ್ಗೊತ್ತಾ ಅಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಒಳ್ಳೆಯದು.

ಆತ್ಮವಿಶ್ವಾಸ

ಅಳುವುದರಿಂದ ಮನಸ್ಸಿನ ನೋವು ಕಡಿಮೆಯಾಗಿ, ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

ಒತ್ತಡ ನಿವಾರಣೆ

ಅಳುವಾಗ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ರಾಸಾಯನಿಕಗಳು ಬಿಡುಗಡೆಯಾಗುತ್ತವೆ, ಮಾನಸಿಕ ಒತ್ತಡ, ನೋವನ್ನು ನಿವಾರಿಸಲು ಸಹಾಯಕ.

ಕಣ್ಣುಗಳ ಸ್ವಚ್ಛತೆ

ಕಣ್ಣೀರು ಒಂದು ರೀತಿಯ ಕಿಣ್ವವನ್ನು ಹೊಂದಿರುತ್ತದೆ, ಇದನ್ನು ಲೈಸೋಜೈಮ್ ಎಂದು ಕರೆಯಲಾಗುತ್ತದೆ. ಇದು ಕಣ್ಣನ್ನು ಸ್ವಚ್ಛಗೊಳಿಸಲು ಸಹಕಾರಿ.

ನೋವು ನಿವಾರಣೆ

ಅಳುವಾಗ ಆಕ್ಸಿಟೋಸಿನ್, ಎಂಡಾರ್ಫಿನ್‌ಗಳಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಮಾನಸಿಕ ಮಾತ್ರವಲ್ಲದೆ ದೈಹಿಕ ನೋವನ್ನೂ ಕಡಿಮೆ ಮಾಡುತ್ತದೆ.

ಸರಿಯಾದ ನಿದ್ರೆ

ಅತ್ತು ಕಣ್ಣೀರು ಹೊರ ಹಾಕಿದರೆ ಒತ್ತಡ ಮತ್ತು ನೋವು ಕಡಿಮೆಯಾಗುತ್ತದೆ. ಜೊತೆಗೆ ಚೆನ್ನಾಗಿ ನಿದ್ರೆಯೂ ಬರುತ್ತದೆ.

ಹಗುರು ಭಾವನೆ

ಅಳಬೇಕು ಅನಿಸಿದಾಗೆಲ್ಲಾ ಅತ್ತು ಬಿಡಿ. ಅತ್ತಾಗ, ಮನಸ್ಸಿನಿಂದ ನೋವು ಹೊರ ಹೋಗಿ ದೇಹ ಹಾಗೂ ಮನಸ್ಸು ಹಗುರವಾದಂತೆ ಭಾಸವಾಗುತ್ತದೆ.