ಸಾಕ್ಸ್‌ ಹಾಕದೆ ಶೂ ಧರಿಸಿದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ ನೋಡಿ
Tv9 Kannada Logo

ಸಾಕ್ಸ್‌ ಇಲ್ಲದೆ ಬರೀ ಶೂ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತಾ?

Pic Credit: pinterest

By Malashree Anchan

9 june 2025

ಫ್ಯಾಶನ್‌

ಕೆಲವರು ಫ್ಯಾಶನ್‌ಗಾಗಿ ಸಾಕ್ಸ್‌ ಹಾಕಿಕೊಳ್ಳದೆ ಶೂ ಧರಿಸುತ್ತಾರೆ. ಇದು ಆರಾಮದಾಯಕವಾಗಿರಬಹುದು ಮತ್ತು ಆಕರ್ಷಕ ನೋಟವನ್ನು ನೀಡಬಹುದು.

ಸಾಕ್ಸ್‌ ಧರಿಸದಿರುವುದು

ಸಾಕ್ಸ್‌ ಹಾಕಿಕೊಳ್ಳದೆ ಶೂ ಧರಿಸುವುದು ಆರಾಮದಾಯಕವಾಗಿದ್ರೂ ಇದು  ಹಲವಾರು ಸಮಸ್ಯೆಗಳನ್ನು ಉಂಟು ಮಾಡಬಹುದು ಎಚ್ಚರ.

ರಕ್ತ ಪರಿಚಲನೆ ಸಮಸ್ಯೆ

 ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಪಾದಗಳಿಗೆ ಹಾನಿಯಾಗುವ ಅಪಾಯವಿದೆ. ಅಲ್ಲದೆ ಇದು ದೇಹದ ರಕ್ತ ಪರಿಚಲನೆ ಪ್ರಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಅಲರ್ಜಿ ಸಮಸ್ಯೆ

ಸಾಕ್ಸ್ ಇಲ್ಲದೆ ಬೂಟುಗಳನ್ನು ಧರಿಸುವುದರಿಂದ ಪಾದಗಳಲ್ಲಿ ಅಲರ್ಜಿಯ ಸಮಸ್ಯೆಗಳನ್ನು ಕಾಣಿಸಿಕೊಳ್ಳಬಹುದು.

ಸೋಂಕಿನ ಅಪಾಯ

ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸಿದರೆ,  ಬೆವರು ತೇವಾಂಶವನ್ನು ಹೆಚ್ಚಿಸುತ್ತದೆ, ಇದು ಅನೇಕ ರೀತಿಯ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕುಗಳಿಗೆ ಕಾರಣವಾಗಬಹುದು.

ವಾಸನೆ

ಸಾಕ್ಸ್‌ ಇಲ್ಲದೆ ಶೂ ಧರಿಸುವುದರಿಂದ ಪಾದಗಳಲ್ಲಿ ಬೆವರು ಸಂಗ್ರಹವಾಗಿ ಬ್ಯಾಕ್ಟೀರಿಯಾಗಳು ಬೆಳೆದು ಪಾದಗಳಿಂದ ಕೆಟ್ಟ ವಾಸನೆ ಬರಬಹುದು.

ಗುಳ್ಳೆಗಳು

ಸಾಕ್ಸ್‌ ಇಲ್ಲದೆ ಶೂ ಧರಿಸುವುದರಿಂದ ಹಿಮ್ಮಡಿ, ಪಾದ ಮತ್ತು ಕಾಲ್ಬೆರಳುಗಳಲ್ಲಿ ಗುಳ್ಳೆಗಳು, ತುರಿಕೆ, ಕಜ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಗುಣಮಟ್ಟ

ಹೀಗೆ ಪಾದಗಳ ಆರೋಗ್ಯ, ಆರೈಕೆಯ ದೃಷ್ಟಿಯಿಂದ ಯಾವಾಗಲೂ ಉತ್ತಮ ಗುಣಮಟ್ಟದ ಶೂ ಹಾಗೂ ಸಾಕ್ಸ್‌ ಧರಿಸವುದು ಒಳ್ಳೆಯದು.