ಹೇರ್‌ ಫಾಲ್‌ ಕಂಟ್ರೋಲ್‌ ಆಗ್ಬೇಕಂದ್ರೆ ಚಹಾ ನೀರಿನಲ್ಲಿ ಕೂದಲು ತೊಳೆಯಬೇಕಂತೆ

Pic Credit: pinterest

By Malashree anchan

18 August 2025 

ಚಹಾ ನೀರು

ಬ್ಲಾಕ್‌ ಟೀ, ಗ್ರೀನ್‌ ಟೀಯಂತಹ ಗಿಡಮೂಲಿಕೆ ಚಹಾ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಕೂದಲಿನ ಬೆಳವಣಿಗೆಗೆ ಸಹಕಾರಿ

ಚಹಾ ನೀರಿನಿಂದ ಕೂದಲು ತೊಳೆಯುವುದರಿಂದ ಕೂದಲು ವೇಗವಾಗಿ ಸೊಂಪಾಗಿ ಬೆಳೆಯುತ್ತದೆ, ಹೇರ್‌ ಫಾಲ್‌ ಸಮಸ್ಯೆಯೂ ಕಡಿಮೆಯಾಗುತ್ತದೆ.

ಕೂದಲ ಹೊಳಲು ಹೆಚ್ಚಿಸುತ್ತದೆ

ಚಹಾ ನೀರು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಜೊತೆಗೆ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ.

ಸೋಂಕು ತೊಡೆದು ಹಾಕುತ್ತದೆ

ನಿಯಮಿತವಾಗಿ ಚಹಾ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಚಹಾ ಎಲೆಗಳಲ್ಲಿರುವ ಪಾಲಿಫಿನಾಲ್ ಅಂಶ ನೆತ್ತಿಯ ಸೋಂಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ತಲೆ ಹೊಟ್ಟು ನಿವಾರಣೆ

ಚಹಾ ಎಲೆಯ ನೀರು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಮಸ್ಯೆ ಇರುವವರು ನಿಯಮಿತವಾಗಿ ಈ ನೀರಿನಿಂದ ತಲೆಗೂದಲು ತೊಳೆಯಬೇಕು.

ಕೂದಲನ್ನು ಕಪ್ಪಾಗಿಸುತ್ತದೆ

ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಚಹಾ ಎಲೆಯ ನೀರಿನಿಂದ ಕೂದಲು ತೊಳೆಯಿರಿ. ಇದು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.

ಕೂದಲು ಉದುರುವಿಕೆ ನಿಯಂತ್ರಣ

ಚಹಾ ನೀರಿನಲ್ಲಿರುವ ಕೆಫೀನ್ ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆಯನ್ನುಸುಧಾರಿಸುತ್ತದೆ. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಚಹಾ ನೀರಿನ ಬಳಕೆ

1-2  ಕಪ್ ನೀರಿಗೆ 2-3 ಟೀಸ್ಪೂನ್ ಚಹಾ ಎಲೆಗಳನ್ನು ಸೇರಿಸಿ ಅದನ್ನು 5 ನಿಮಿಷಗಳ ಕಾಲ ಕುದಿಸಿ. ನೀರು ತಣ್ಣಗಾದ ಬಳಿಕ ಅದನ್ನು ನೆತ್ತಿ, ಕೂದಲಿಗೆ ಹಚ್ಚಿಕೊಳ್ಳಿ.