ಹೆಂಡತಿಯಾದವಳು ಗಂಡನಿಂದ ಬಯಸೋದೇನು ಗೊತ್ತಾ?

Pic Credit: pinterest

By Malashree anchan

21 August 2025 

ಪ್ರಾಮಾಣಿಕತೆ

ಮಹಿಳೆಯು ತನ್ನ ಗಂಡ ಪ್ರಾಮಾಣಿಕವಾಗಿರಬೇಕು, ಸುಳ್ಳು ಹೇಳಬಾರದು, ನಂಬಿಕೆಗೆ ಮೋಸ ಮಾಡಬಾರದು ಎಂದು ಬಯಸುತ್ತಾಳೆ.

ಪ್ರೀತಿ ಮತ್ತು ವಾತ್ಸಲ್ಯ

ಪ್ರತಿಯೊಬ್ಬ ಮಹಿಳೆಯೂ ಸಹ ತನ್ನ ಗಂಡನಿಂದ ಅತಿಯಾದ ಪ್ರೀತಿಯನ್ನು ನಿರೀಕ್ಷಿಸುತ್ತಾಳೆ. ಹಾಗಾಗಿ ಗಂಡ ತನ್ನ ಹೆಂಡತಿಯ ನಿರೀಕ್ಷೆಗೆ ತಕ್ಕಂತೆ ಆಕೆಗೆ ಪ್ರೀತಿ, ಕಾಳಜಿ ತೋರಬೇಕು.

ಗೌರವ

ಮಹಿಳೆ ತನ್ನ ಗಂಡ ತನ್ನನ್ನು ಗೌರವಿಸಬೇಕು, ಮನೆಕೆಲಸದಲ್ಲಿ ಸಹಾಯ ಮಾಡಬೇಕು, ಸ್ನೇಹಿತರು, ಕುಟುಂಬಸ್ಥರ ಮುಂದೆ ತನ್ನನ್ನು ಕೀಳಾಗಿ ಕಾಣಬಾರದು ಎಂದು ಬಯಸುತ್ತಾಳೆ.

ಬೆಂಬಲ

ಪ್ರತಿಯೊಬ್ಬ ಹೆಂಡತಿಯೂ ತನ್ನ ಕನಸುಗಳು ಮತ್ತು ಗುರಿಗಳನ್ನು ಸಾಧಿಸಲು ತನ್ನ ಪತಿ ಬೆಂಬಲ ನೀಡಬೇಕೆಂದು ಬಯಸುತ್ತಾಳೆ.

ಸಮಯ

ಎಷ್ಟೇ ಬ್ಯುಸಿಯಾಗಿದ್ದರೂ ಗಂಡ ನನಗಾಗಿ ಸ್ವಲ್ಪ ಸಮಯವನನು ನೀಡಬೇಕು ಎಂದು ಬಯಸುತ್ತಾಳೆ. ಪತಿಯೊಂದಿಗೆ ಗುಣಮಟ್ಟದ ಸಯಮ ಕಳೆಯಬೇಕೆಂದು ಇಷ್ಟಪಡುತ್ತಾಳೆ.

ಮೆಚ್ಚುಗೆಯ ಮಾತು

ತಾನು ಚೆಂದವಾಗಿ ರೆಡಿಯಾದಾಗ ಮೆಚ್ಚುಗೆಯನ್ನು ನೀಡಬೇಕು, ಸಣ್ಣಪುಟ್ಟ ಪ್ರಯತ್ನಗಳನ್ನು ಗಂಡನಾದವನು ಶ್ಲಾಘಿಸಬೇಕು ಎಂದು ಬಯಸುತ್ತಾಳೆ.

ನಿರ್ಧಾರ ತೆಗೆದುಕೊಳ್ಳುವುದು

ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವುದು, ಅವಳ ಪ್ರತಿಯೊಂದು ನಿರ್ಧಾರವನ್ನು ಗೌರವಿಸಬೇಕು ಎಂದು ಬಯಸುತ್ತಾಳೆ.

ಭಾವನೆ ಅರ್ಥಮಾಡಿಕೊಳ್ಳುವುದು

ಪ್ರತಿಯೊಬ್ಬ ಹೆಣ್ಣು ಕೂಡ ನನ್ನ ಗಂಡ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು, ಇಷ್ಟಕಷ್ಟಗಳನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತಾಳೆ.