Pic Credit: pinterest
By Malashree Anchan
16 May 2025
ದಾಳಿಂಬೆ ದೇಹಕ್ಕೆ ಬಹಳಷ್ಟು ಶಕ್ತಿಯನ್ನು ನೀಡುತ್ತದೆ. ರಕ್ತದ ಪರಿಚಲನೆಯಿಂದ ಹಿಡಿದು, ಹೃದಯದ ಆರೋಗ್ಯದವರೆಗೆ ತುಂಬಾನೇ ಒಳ್ಳೆಯದು.
ದಾಳಿಂಬೆ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪೋಷಕಾಂಶಗಳ ಶಕ್ತಿಶಾಲಿ ಕೇಂದ್ರವಾಗಿದೆ.
ರೋಗನಿರೋಧಕ ಶಕ್ತಿ ಚರ್ಮದ ಕಾಂತಿ ಹೆಚ್ಚಿಸಲುಕರುಳಿನ ಆರೋಗ್ಯವನ್ನು ಉತ್ತೇಜಿಸಲು ಪ್ರತಿದಿನ ಒಂದು ಬೌಲ್ ದಾಳಿಂಬೆ ತಿನ್ನಬೇಕಂತೆ.
ದಾಳಿಂಬೆ ರಸವು ರಕ್ತದ ಹರಿವನ್ನು ಸುಧಾರಿಸುತ್ತದೆ ಆದ್ದರಿಂದ ಪ್ರತಿದಿನ ಒಂದು ಬೌಲ್ ಈ ಹಣ್ಣನ್ನು ತಿನ್ನಿ.
ದಾಳಿಂಬೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ದಾಳಿಂಬೆ ಅಪಧಮನಿಯ ಪ್ಲೇಕ್ ನಿರ್ಮಾಣವನ್ನು ತಡೆಯುವ ಮೂಲಕ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಇದರಲ್ಲಿರುವ ಉರಿಯೂತ ನಿವಾರಕ ಗುಣಲಕ್ಷಣಗಳು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯಲು ಸಹಕಾರಿ.
ಅಗತ್ಯ ಪೋಷಕಾಂಶಗಳಿಂದ ತುಂಬಿದ ದಾಳಿಂಬೆಯನ್ನು ಪ್ರತಿದಿನ ಸೇವನೆ ಮಾಡುವ ಮೂಲಕ ಜೀರ್ಣಕ್ರಿಯೆ ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು.