Pic Credit: pinterest
By Malashree Anchan
20 May 2025
ಮದುವೆ ಅನ್ನೋದು ಜೀವನದ ಬಹುಮುಖ್ಯ ಘಟ್ಟ. ಕೆಲವರು 20, 25 ವರ್ಷ ವಯಸ್ಸಿಗೆ ಮದುವೆಯಾದ್ರೆ, ಕೆಲವರು 30 ದಾಟಿದ ಬಳಿಕ ಮದುವೆಯಾಗುತ್ತಾರೆ.
ಯಾವ ವಯಸ್ಸಲ್ಲಿ ಮದುವೆಯಾದ್ರೆ ಬೆಟರ್, ಮದುವೆಯಾಗಲು ಸೂಕ್ತ ವಯಸ್ಸು ಯಾವುದು ಅಂತೆಲ್ಲಾ ಹಲವರಲ್ಲಿ ಪ್ರಶ್ನೆ ಮೂಡುತ್ತದೆ.
ವಯಸ್ಸು ಅಷ್ಟು ಮುಖ್ಯನಾ ಅಂತ ನೋಡಿದಾಗ, ಮದುವೆಗೆ ಪರಿಪೂರ್ಣ ವಯಸ್ಸು ಅನ್ನೋದು ಇಲ್ಲ ಎನ್ನುತ್ತಾರೆ ತಜ್ಞರು.
ಒಬ್ಬ ವ್ಯಕ್ತಿ ಮಾನಸಿಕವಾಗಿ ಪ್ರಬುದ್ಧನಾಗಿದ್ದಾಗ, ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧನಿದ್ದಾಗ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾಗ ಮದುವೆಯಾಗಬಹುದು.
ಇನ್ನೂ ಕೆಲವರು ಬಂಜೆತನದ ಸಮಸ್ಯೆ ಬರಬಾರದು, ಬೇಗ ಮಕ್ಕಳಾಗಬೇಕು ಅಂದ್ರೆ 25 ರಿಂದ 30 ವರ್ಷದ ಒಳಗೆ ಮದುವೆ ಆಗ್ಲೇಬೇಕು ಎನ್ನುತ್ತಾರೆ.
30 ವರ್ಷದ ಬಳಿಕ ಮಹಿಳೆಯರಲ್ಲಿ ಹಾಗೂ 35 ವರ್ಷಗಳ ಬಳಿಕ ಪುರುಷರಲ್ಲಿ ಫಲವತ್ತತೆ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಆದ್ದರಿಂದ 25-30 ವರ್ಷದೊಳಗೆ ಮದುವೆಯಾದರೆ ಸೂಕ್ತ.
35 ವರ್ಷಗಳ ಬಳಿಕವೇ ಮದುವೆಯಾಗುತ್ತೇವೆ ಎನ್ನುವವರು ಮಕ್ಕಳು ಮಾಡಿಕೊಳ್ಳುವ ದೃಷಿಟಯಿಂದ ಐವಿಎಫ್ ತಂತ್ರಗಳ ಸಹಾಯದಿಂದ ಅಂಡಾಣು, ವೀರ್ಯ ಘನೀಕರಿಸಬಹುದು.
ಒಟ್ಟಾರೆಯಾಗಿ ನೋಡುವುದಾದರೆ ಹೆಚ್ಚಿನವರ ಪ್ರಕಾರ ಮದುವೆಗೆ ವಯಸ್ಸು ಅನ್ನೋದು ಮುಖ್ಯ ಆಗಲ್ಲ. ಜೀವನ ನಡೆಸುವ ಪ್ರಬುದ್ಧತೆ ಮುಖ್ಯವಂತೆ.