Pic Credit: pinterest
By Malashree anchan
03 September 2025
ಬೆಳಿಗ್ಗೆ ಬೇಗನೆ ಏಳುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸುಲಭವಾಗುತ್ತದೆ ಜಡತ್ವ ಇರುವುದಿಲ್ಲ. ಮತ್ತು ನೀವು ದಿನವಿಡೀ ಸಕಾರಾತ್ಮಕತೆಯಿಂದ ಇರಬಹುದು.
ಬೆಳಿಗ್ಗೆ ಎದ್ದ ನಂತರ, ನೀವು ನಿಮ್ಮ ದಿನವನ್ನು ಯೋಜಿಸಬೇಕು. ಇಡೀ ದಿನವನ್ನು ಯೋಜಿಸುವ ವ್ಯಕ್ತಿಯು ತನ್ನ ಗುರಿಗಳನ್ನು ಸಾಧಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ.
ಸಮಯ ತುಂಬಾ ಅಮೂಲ್ಯವಾದುದು, ಅದನ್ನು ಬುದ್ಧಿವಂತಿಕೆಯಿಂದ ಬಳಸಬೇಕು ನೀವು ಮೊದಲೇ ಸಿದ್ಧಪಡಿಸಿದ ಯೋಜನೆಯ ಪ್ರಕಾರ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು.
ಬೆಳಗ್ಗೆ ಬೇಗ ಎದ್ದು, ಯೋಗ, ಲಘು ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿ, ಇದು ನಿಮ್ಮನ್ನು ಆಕ್ಟಿವ್ ಆಗಿಡಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ 10 ರಿಂದ 20 ನಿಮಿಷಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿ. ಇದು ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ನೀವು ದಿನವಿಡೀ ಏಕಾಗ್ರತೆಯಿಂದ ಇರಲು ಸಹಾಯ ಮಾಡುತ್ತದೆ.
ಸಕಾರಾತ್ಮಕ ಚಿಂತನೆಗಳು ಯಶಸ್ಸಿನ ಹಾದಿಯನ್ನು ಸುಲಭಗೊಳಿಸುತ್ತದೆ. ನೀವು ಪ್ರತಿನಿತ್ಯ ಯಶಸ್ಸು ನನ್ನದಾಗುತ್ತದೆ ಎಂದು ಸಕಾರಾತ್ಮಕತೆಯಿಂದ ದಿನವನ್ನು ಪ್ರಾರಂಭಿಸಿ.
ಕೆಲವರು ತಮ್ಮ ದಿನವನ್ನು ಜಡತ್ವದಿಂದ ಪ್ರಾರಂಬಿಸುತ್ತಾರೆ. ಹೀಗೆ ದಿನದ ಆರಂಭದಲ್ಲಿಯೇ ಸೋಮಾರಿತನ ಆವರಿಸಿದರೆ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.
ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಎದ್ದು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ.