ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇಬಾರದು

Pic Credit: pinterest

By Preeti Bhat

30 June 2025

ದಿನದ ಆರಂಭ

ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡುವುದರಿಂದ ಸಂಪೂರ್ಣ ದಿನವೇ ಹಾಳಗುತ್ತಂತೆ. ಶಾಸ್ತ್ರಗಳಲ್ಲಿಯೂ ಈ ಬಗ್ಗೆ ಹೇಳಲಾಗಿದೆ.

ಕನ್ನಡಿ

ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕನ್ನಡಿಯಲ್ಲಿ ಮುಖ ನೋಡಬಾರದಂತೆ. ಈ ಅಭ್ಯಾಸವು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ನಿಂತ ಗಡಿಯಾರ

ಬೆಳಿಗ್ಗೆ ಎದ್ದ ತಕ್ಷಣ ನಿಂತ ಗಡಿಯಾರವನ್ನು ನೋಡುವುದರಿಂದ ಆಗಬೇಕಿದ್ದ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುವುದು ಮಾತ್ರವಲ್ಲದೆ  ಜೀವನದಲ್ಲಿ ತೊಂದರೆ ಉಂಟಾಗುತ್ತದೆ.

ಆಕ್ರಮಣಕಾರಿ ಪ್ರಾಣಿಗಳ ಚಿತ್ರ

ಹುಲಿ ಇತ್ಯಾದಿ ಆಕ್ರಮಣಕಾರಿ ಪ್ರಾಣಿಗಳ ಫೋಟೋಗಳನ್ನು ನೋಡಬಾರದಂತೆ. ಏಕೆಂದರೆ ಇದು ದಿನವಿಡೀ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ತೊಳೆಯದ ಪಾತ್ರೆ

 ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಯಲ್ಲಿರುವ ತೊಳೆಯದ ಕೊಳಕು ಪಾತ್ರೆಗಳನ್ನು ನೋಡುವುದು ಕೂಡಾ ಅಶುಭವೆಂದು ಪರಿಗಣಿಸಲಾಗಿದೆ.

ನೆರಳು

ನೆರಳು ನೋಡುವುದರಿಂದ ಆ ವ್ಯಕ್ತಿಯಲ್ಲಿ ಭಯ, ಒತ್ತಡ ಮತ್ತು ಗೊಂದಲ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದೇಳಬೇಕು.

ಮೊಬೈಲ್

ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡಬಾರದು. ಹೌದು ಬೆಳಗ್ಗೆ ಬೆಳಗ್ಗೆ ನಕಾರಾತ್ಮಕ ಅಥವಾ ಕೆಟ್ಟ ಸುದ್ದಿಗಳನ್ನು ಕೇಳುವುದರಿಂದ ಇಡೀ ದಿನವೇ ಹಾಳಾಗುತ್ತದೆ.

ಸಕಾರಾತ್ಮಕತೆ

ಹೀಗಿರುವಾಗ ಬೆಳಿಗ್ಗೆ ಬೇಗನೆ ಎದ್ದು, ದೇವರನ್ನು ಧ್ಯಾನಿಸಿ, ಜೊತೆಗೆ ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಚಿತ್ರಗಳನ್ನು ನೋಡಿ ದಿನವನ್ನು ಆರಂಭಿಸಿ.