Pic Credit: pinterest
By Malashree anchan
05 July 2025
ರುಚಿಕರವಾದ ಬಿರಿಯಾನಿ ಖಾರ ಮಾತ್ರವಲ್ಲದೆ ಎಣ್ಣೆಯುಕ್ತವಾಗಿರುವುದರಿಂದ ಇದನ್ನು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸಲೇಬಾರದಂತೆ.
ಬಿರಿಯಾನಿ ತಿಂದ ನಂತರ ಸೋಡಾ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಇದರಿಂದ ಗ್ಯಾಸ್, ಹೊಟ್ಟೆ ಉಬ್ಬುವಿಕೆಯ ಸಮಸ್ಯೆ ಕಾಣಿಸುತ್ತದೆ.
ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣ ಬಿರಿಯಾನಿ ತಿಂದ ಬಳಿಕ ಖೀರ್, ರಸಮಲೈ, ಐಸ್‌ಕ್ರೀಮ್ ಇತ್ಯಾದಿ ಸಿಹಿ ತಿನಿಸುಗಳನ್ನು ತಿನ್ನುವುದನ್ನು ಸಹ ತಪ್ಪಿಸಬೇಕು.
ಕಿತ್ತಳೆ, ನಿಂಬೆಹಣ್ಣು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ, ಏಕೆಂದರೆ ಇದರಿಂದ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
ಬಿರಿಯಾನಿ ತಿಂದ ನಂತರ ಮಿಲ್ಕ್ ಶೇಕ್ ಮತ್ತು ಹಾಲು ಸೇವನೆ ಮಾಡಬಾರದು. ಏಕೆಂದರೆ ಇದು ಆಮ್ಲೀಯತೆಗೆ ಕಾರಣವಾಗುತ್ತದೆ.
ಬಿರಿಯಾನಿ ತಿಂದ ಬಳಿಕ ಉಪ್ಪಿನಕಾಯಿ, ಡೀಪ್‌ಫ್ರೈಡ್ ಆಹಾರಗಳನ್ನು ಸೇವನೆ ಮಾಡುವುದರಿಂದ ಆಮ್ಲೀಯತೆ, ಗ್ಯಾಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಕೆಲವರು ಬಿರಿಯಾನಿ ತಿಂದ ತಕ್ಷಣ ಕಾಫಿ ಅಥವಾ ಟೀ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಆಮ್ಲೀಯತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಬಿರಿಯಾನಿ ತಿಂದ ಬಳಿಕ ಸೋಂಪು ತಿನ್ನಬಹುದು. ಒಂದು ಲೋಟ ಬೆಚ್ಚಗಿನ ನೀರು ಅಥವಾ ಮಜ್ಜಿಗೆಯನ್ನು ಸೇವನೆ ಮಾಡಬಹುದು.