Pic Credit: pinterest
By Malashree Anchan
2 june 2025
ಚಹಾದೊಂದಿಗೆ ಅಥವಾ ಚಹಾ ಕುಡಿದ ತಕ್ಷಣ ಅಪ್ಪಿತಪ್ಪಿಯೂ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು.
ಚಹಾದಲ್ಲಿರುವ ಟ್ಯಾನಿನ್ ಅಂಶ ದೇಹದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಇದು ಗ್ಯಾಸ್, ಆಮ್ಲೀಯತೆ ಸಮಸ್ಯೆಗೆ ಕಾರಣವಾಗುತ್ತದೆ.
ಚಹಾ ಕುಡಿದ ತಕ್ಷಣ ಐಸ್‌ಕ್ರೀಮ್‌ನಂತಹ ತಣ್ಣನೆಯ ಆಹಾರಗಳನ್ನು ತಿನ್ನಬೇಡಿ. ಏಕೆಂದರೆ ಇದು ಜೀರ್ಣಕ್ರಿಯೆಯ ಸಮಸ್ಯೆ ಉಂಟು ಮಾಡುತ್ತದೆ.
ಚಹಾ ಕುಡಿದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಚಹಾ ಕುಡಿದ ತಕ್ಷಣ ಮೊಸರು ಮತ್ತು ಮಜ್ಜಿಗೆಯನ್ನು ಕೂಡಾ ಸೇವನೆ ಮಾಡಬಾರದು. ಇದು ಕೂಡಾ ಜೀರ್ಣಕ್ರಿಯೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಚಹಾ ಕುಡಿದ ನಂತರ ಕೂಲ್ ಡ್ರಿಂಕ್ಸ್ ಕುಡಿಯುವುದು ಕೂಡಾ ಒಳ್ಳೆಯದಲ್ಲ. ಏಕೆಂದರೆ ಇದರಿಂದ ಶೀತ, ಕೆಮ್ಮು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಕಬ್ಬಿಣಾಂಶವಿರುವ ಆಹಾರವನ್ನು ಚಹಾದೊಂದಿಗೆ ಸೇವನೆ ಮಾಡುವುದರಿಂದ ಇದು ದೇಹವು ಕಬ್ಬಿಣಾಂಶ ಹೀರಿಕೊಳ್ಳುವುದನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಚಹಾದೊಂದಿಗೆ ಅಥವಾ ಚಹಾ ಕುಡಿದ ತಕ್ಷಣ ಕೇಕ್, ಪೇಸ್ಟ್ರಿಗಳಂತಹ ಸಿಹಿ ತಿನಿಸುಗಳನ್ನು ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.