ಯಾವುದೇ ಕಾರಣಕ್ಕೂ ಬೆಳಗಿನ ದಿನಚರಿಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ
Tv9 Kannada Logo

ಯಾವುದೇ ಕಾರಣಕ್ಕೂ ಬೆಳಗಿನ ದಿನಚರಿಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Pic Credit: pinterest

By Malashree anchan

21 July 2025

ಬೆಳಗ್ಗಿನ ಹೊತ್ತು ಸಕಾರಾತ್ಮಕವಾಗಿದ್ದರೆ ಇಡೀ ದಿನವೇ ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಬೆಳಗಿನ ದಿನಚರಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.

ಬೆಳಗಿನ ದಿನಚರಿ

ಬೆಳಗ್ಗಿನ ಹೊತ್ತು ಸಕಾರಾತ್ಮಕವಾಗಿದ್ದರೆ ಇಡೀ ದಿನವೇ ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಬೆಳಗಿನ ದಿನಚರಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.

ಎದ್ದ ತಕ್ಷಣ ಫೋನ್‌ ನೋಡುವುದು ಒಳ್ಳೆಯದಲ್ಲ. ಇದು ಮೆದುಳಿನ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ, ಇದರಿಂದ ನೀವು ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಮೊಬೈಲ್ ಬಳಕೆ‌

ಎದ್ದ ತಕ್ಷಣ ಫೋನ್‌ ನೋಡುವುದು ಒಳ್ಳೆಯದಲ್ಲ. ಇದು ಮೆದುಳಿನ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ, ಇದರಿಂದ ನೀವು ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಬೆಳಗ್ಗೆ ಆಹಾರ ಸೇವನೆ ಮಾಡದೆ ಹಸಿವಿನಿಂದ ಇರುವುದು ಹಾನಿಕಾರಕ. ಇದು ಮೆದುಳಿನ ಶಕ್ತಿಯನ್ನು ಕುಗ್ಗಿಸುತ್ತದೆ, ನಿಮ್ಮ ಏಕಾಗ್ರತೆ, ಮನಸ್ಥಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ.

ಉಪಹಾರ ಸೇವಿಸದಿರುವುದು

ಬೆಳಗ್ಗೆ ಆಹಾರ ಸೇವನೆ ಮಾಡದೆ ಹಸಿವಿನಿಂದ ಇರುವುದು ಹಾನಿಕಾರಕ. ಇದು ಮೆದುಳಿನ ಶಕ್ತಿಯನ್ನು ಕುಗ್ಗಿಸುತ್ತದೆ, ನಿಮ್ಮ ಏಕಾಗ್ರತೆ, ಮನಸ್ಥಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ.

ನೀರು ಕುಡಿಯದಿರುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಹೀಗೆ ಬೆಳಿಗ್ಗೆ ನೀರು ಕುಡಿಯುವುದುದರಿಂದ ಮೆದುಳಿನ ಕೋಶಗಳು ತುಂಬಾ ಚುರುಕಾಗುತ್ತವೆ.

ಬೆಳಗ್ಗೆ ತಡವಾಡಿ ಏಳುವುದು

ಬೆಳಗ್ಗೆ ತಡವಾಗಿ ಏಳುವುದು ಕೂಡಾ ಒಳ್ಳೆಯದಲ್ಲ. ಹೀಗೆ ತಡವಾಗಿ ಎದ್ದರೆ, ಇಡೀ ದಿನ ಜಡತ್ವದಿಂದ ಕೂಡಿರುತ್ತದೆ.

ವ್ಯಾಯಾಮ ಮಾಡದಿರುವುದು

ವ್ಯಾಯಾಮ ಮಾಡದಿರುವುದು ಕೂಡಾ ಒಳ್ಳೆಯದಲ್ಲ. ದಿನವಿಡಿ ಆಕ್ಟಿವ್‌ ಆಗಿರಲು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಳಗ್ಗೆ ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

ಜಗಳ

ಬೆಳಗ್ಗೆ ಎದ್ದ ತಕ್ಷಣ ಮನೆಯವರೊಂದಿಗೆ ಜಗಳವಾಡುವುದು ಅಥವಾ ಕೋಪ ಮಾಡಿಕೊಳ್ಳುವ ಅಭ್ಯಾಸವು ನಿಮ್ಮ ಇಡೀ ದಿನವನ್ನು ಹಾಳುಮಾಡಬಹುದು.

ನಕಾರಾತ್ಮಕ ಯೋಚನೆ

ಬೆಳಗ್ಗೆ ಎದ್ದ ತಕ್ಷಣವೇ ನೀವು ನೋವುಗಳು, ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ಆ ದಿನವೇ ಹಾಳಾಗುತ್ತದೆ. ಹಾಗಾಗಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಿ.