ಬೆಳಗ್ಗೆ ವಾಕಿಂಗ್‌ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ

Pic Credit: pinterest

By Malashree anchan

29 August 2025 

ನೀರು ಕುಡಿಯದಿರುವುದು

ನೀರು ಕುಡಿಯದೆ ವಾಕಿಂಗ್‌ ಹೋಗುವಂತಹ ತಪ್ಪನ್ನು ಮಾಡಬೇಡಿ.  ಈ ತಪ್ಪು  ದೇಹವನ್ನು ಬೇಗನೆ ದಣಿದಂತೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಖಾಲಿ ಹೊಟ್ಟೆಯಲ್ಲಿ ವಾಕಿಂಗ್

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದೀರ್ಘಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಬಹುದು. ಇದು ತಲೆತಿರುಗುವಿಕೆ, ಆಯಾಸ, ತಲೆನೋವು ಉಂಟು ಮಾಡಬಹುದು.

ವಾರ್ಮ್‌ಅಪ್‌ ಮಾಡದಿರುವುದು

ದೇಹವನ್ನು ವಾರ್ಮ್‌ ಅಪ್‌ ಮಾಡದೆ ವಾಕಿಂಗ್‌ ಮಾಡಿದರೆ ಇದರಿಂದ ಸ್ನಾಯುಗಳು, ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ವಾಕಿಂಗ್‌ ಮುನ್ನ ದೇಹವನ್ನು ವಾರ್ಮ್‌ ಅಪ್‌ ಮಾಡಿಕೊಳ್ಳಿ.

ಕಾಫಿ ಕುಡಿಯುವುದು

ಕೆಲವರು ವಾಕಿಂಗ್ ಹೋಗುವ ಮೊದಲು ದೇಹಕ್ಕೆ ಶಕ್ತಿ ಲಭಿಸಲೆಂದು ಒಂದು ಕಪ್‌ ಕಾಫಿ ಕುಡಿಯುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ.

ಶೌಚಾಲಯಕ್ಕೆ ಹೋಗದಿರುವುದು

ವಾಕಿಂಗ್ ಮುನ್ನ ವಾಶ್‌ರೂಮ್‌ಗೆ ಹೋಗುವುದನ್ನು ತಪ್ಪಿಸುವ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ. ಯುಟಿಐ ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೊಬೈಲ್‌ ನೋಡುವುದು

ಕೆಲವರು ವಾಕಿಂಗ್‌ ವೇಳೆ ಮೊಬೈಲ್ ಫೋನ್ ಬಳಸುತ್ತಲೇ ಇರುತ್ತಾರೆ. ಹೀಗೆ ಮಾಡುವುದರಿಂದ ಪ್ರಯೋಜನಕ್ಕಿಂತ ನಷ್ಟೇ ಹೆಚ್ಚು.

ಶೂ ಧರಿಸದಿರುವುದು

ವಾಕಿಂಗ್‌ ಮಾಡುವಾಗ ಸರಿಯಾದ ಶೂಗಳನ್ನು ಧರಿಸುವುದು ಕೂಡಾ ಅಷ್ಟೇ ಮುಖ್ಯ. ತಪ್ಪು ಶೂ ಧರಿಸುವುದರಿಂದ ಪಾದಗಳಿಗೆ ನೋವಾಗುವ ಸಾಧ್ಯತೆ ಇರುತ್ತದೆ.

ಅತಿಯಾದ ವಾಕಿಂಗ್‌

ವಾಕಿಂಗ್‌ ಮಾಡುವಾಗ ಸರಿಯಾದ ಶೂಗಳನ್ನು ಧರಿಸುವುದು ಕೂಡಾ ಅಷ್ಟೇ ಮುಖ್ಯ. ತಪ್ಪು ಶೂ ಧರಿಸುವುದರಿಂದ ಪಾದಗಳಿಗೆ ನೋವಾಗುವ ಸಾಧ್ಯತೆ ಇರುತ್ತದೆ.