Pic Credit: pinterest
By Malashree Anchan
16 june 2025
ಕೆಲವರಿಗೆ ಇತರರ ಬಟ್ಟೆ, ಚಪ್ಪಲಿ ಹೀಗೆ ಕೆಲವೊಂದು ವಸ್ತುಗಳನ್ನು ತೆಗೆದುಕೊಳ್ಳುವ ಅಭ್ಯಾಸ ಇರುತ್ತದೆ. ಶಾಸ್ತ್ರಗಳ ಪ್ರಕಾರ ಹೀಗೆ ಮಾಡುವುದರಿಂದ ಸಮಸ್ಯೆಯೇ ಹೆಚ್ಚಂತೆ.
ಇತರರ ಬಟ್ಟೆಗಳನ್ನು ಎಂದಿಗೂ ಹಾಕಿಕೊಳ್ಳಬಾರದು. ಯಾಕಂದ್ರೆ ನೀವು ಇತರರ ಬಟ್ಟೆಯನ್ನು ಧರಿಸುವುದರಿಂದ ಆ ವ್ಯಕ್ತಿಯ ನಕಾರಾತ್ಮಕ ಶಕ್ತಿ ನಿಮಗೆ ಹರಡುವ ಸಾಧ್ಯತೆ ಇರುತ್ತದೆ.
ಎಂದಿಗೂ ಇನ್ನೊಬ್ಬರ ಕೈ ಗಡಿಯಾರವನ್ನು ಧರಿಸಬಾರದು. ಇದರಿಂದ ಅವರಲ್ಲಿರುವ ನಕಾರಾತ್ಮಕ ಶಕ್ತಿ ನಿಮಗೂ ಹರಡುವ ಸಾಧ್ಯತೆ ಇರುತ್ತದೆ.
ಶಾಸ್ತ್ರಗಳ ಪ್ರಕಾರ ಇತರರ ಚಪ್ಪಲಿಗಳನ್ನು ಧರಿಸುವುದರಿಂದ ಕೆಲಸದಲ್ಲಿ ಅಡೆತಡೆ ಸೇರಿದಂತೆ ಒಂದಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಶಾಸ್ತ್ರಗಳ ಪ್ರಕಾರ ಖರ್ಚೀಫನ್ನು ಯಾರಿಂದಲೂ ಉಚಿತವಾಗಿ ಪಡೆಯಬಾರದು. ಏಕೆಂದರೆ ಇದರಿಂದ ಜಗಳ, ಉದ್ವಿಗ್ನತೆ ಸೇರಿದಂತೆ ಆರ್ಥಿಕ ನಷ್ಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಉಪ್ಪನ್ನು ಉಚಿತವಾಗಿ ಪಡೆದರೆ ನಿಮ್ಮ ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವ ಸಾಧ್ಯತೆ ಇರುತ್ತದೆ. ಜೊತೆಗೆ ಇದು ಆರ್ಥಿಕ ಸಮಸ್ಯೆ ಉಂಟಾಗಲು ಕಾರಣವಾಗಬಹುದು.
ಬೇರೆಯವರು ಬಳಸಿದ ಪೆನ್ನು ಬಳಸುವುದರಿಂದ ಅದು ಕಲಿಕೆಗೆ ಅಡ್ಡಿಯಾಗಬಹುದು. ಅಲ್ಲದೆ ಇದರಿಂದ ಹೂಡಿಕೆಗೆ ಸಂಬಂಧಿಸಿದ ವಿಷಯದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯವಿದ್ದು, ಸಾಲ ಪಡೆದ ನಂತರ ಅದನ್ನು ಆದಷ್ಟು ಬೇಗ ಹಿಂದಿರುಗಿಸಿ, ಇಲ್ಲದಿದ್ದರೆ ಅದು ನಿಮಗೆ ದುರಾದೃಷ್ಟವನ್ನು ತರುತ್ತದೆ.