Pic Credit: pinterest
By Malashree Anchan
28 May 2025
ಈಗಂತೂ ಮೊಬೈಲ್ ನಮ್ಮ ದೈನಂದಿನ ಜೀವನದ ಭಾಗವಾಗಿ ಹೋಗಿದ್ದು, ಜನರ ಕೈಯಿಂದ ಮೊಬೈಲ್ ಫೋನ್ ತಪ್ಪೋದೇ ಇಲ್ಲ.
ಶೌಚಾಲಯದಲ್ಲಿ ಕುಳಿತು ಮೊಬೈಲ್ ಬಳಕೆ ಮಾಡ್ಬಾರ್ದು ಎಂದು ಹೇಳ್ತಾರೆ ಅಲ್ವಾ. ಅದೇ ರೀತಿ ಅಡುಗೆ ಮನೆಯಲ್ಲೂ ಕೂಡಾ ಮೊಬೈಲ್ ಯೂಸ್ ಮಾಡ್ಬಾರ್ದು.
ಮೊಬೈಲ್ ನೋಡುತ್ತಾ ಅಡುಗೆ ಮಾಡಲು ಹೋದ್ರೆ, ಗಮನ ಬೇರೆಡೆ ಹೋಗಿ ಅಡುಗೆ ಕೆಡುವಂತಹ, ಉಪ್ಪು-ಖಾರ ರುಚಿ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಅಡುಗೆ ಕೆಲಸದಲ್ಲಿರುವಾಗ ಮೊಬೈಲ್ ನೋಡಿದ್ರೆ ಕೈಗೆ ಚಾಕು ತಾಕುವಂತಹ, ಅಡುಗೆ ಮಾಡುವಾಗ ಬಿಸಿ ತಾಕುವಂತಹ ಸಂಭವ ಇರುತ್ತದೆ.
ಮೊಬೈಲ್‌ನ ಬ್ಯಾಕ್ಟೀರಿಯಾಗಳು ಅಡುಗೆಗೂ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಡುಗೆ ಮಾಡುವಾಗ ಸ್ವಚ್ಛತೆ, ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.
ಗ್ಯಾಸ್‌ನಿಂದ ಸೋರಿಕೆಯಾಗುವ ಅನಿಲವು ಫೋನ್‌ನಿಂದ ಹೊರಸೂಸುವ ವಿಕಿರಣದ ಸಂಪರ್ಕಕ್ಕೆ ಬಂದರೆ ಸ್ಫೋಟ ಅಥವಾ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಅಡುಗೆ ಮಾಡುವಾಗ ಫೋನ್ ನೋಡಿದ್ರೆ ಕೆಲವೊಮ್ಮೆ ಕೈತಪ್ಪಿ ಮೊಬೈಲ್ ನೀರಿಗೆ, ಬಿಸಿ ಅಡುಗೆಗೆ ಬೀಳುವ ಸಾಧ್ಯತೆ ಇರುತ್ತದೆ.
ಒಟ್ಟಾರೆಯಾಗಿ ನಿಮ್ಮ ಹಾಗೂ ಮೊಬೈಲ್‌ನ ಸುರಕ್ಷತೆಯ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಫೋನ್ ಬಳಸದಿರುವುದೇ ಉತ್ತಮ