06 Dec 2025

Pic credit - Pintrest

Author: Akshay Pallamjalu 

ಕೂದಲು ಉದುರುವ ಸಮಸ್ಯೆಗೆ ಈ ಆಹಾರಗಳೂ ಕಾರಣ

ರಾಸಾಯನಿಕ ಮಿಶ್ರಿತ ಶ್ಯಾಂಪೂ, ಒತ್ತಡ, ಕಳಪೆ ಜೀವನಶೈಲಿ ಮಾತ್ರವಲ್ಲ ಕೆಲವೊಂದು ಆಹಾರಗಳ ಅತಿಯಾದ ಸೇವನೆಯೂ ಕೂದಲು ಉದುರುವಿಕೆಗೆ ಕಾರಣವಂತೆ.

ಕೂದಲು ಉದುರುವಿಕೆ

Pic credit - Pintrest

ಅತಿಯಾದ ಸಕ್ಕರೆ ಸೇವನೆ ಸಹ ಕೂದಲು ಉದುರುವಿಕೆಗೆ ಕಾರಣ. ಹೆಚ್ಚು ಸಕ್ಕರೆ ಸೇವನೆಯು ಕೂದಲು ಉದುರುವಿಕೆ ಮತ್ತು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಸಕ್ಕರೆ

Pic credit - Pintrest

ಜಂಕ್‌ ಫುಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳಿದ್ದು, ಇವು ಕೂದಲನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ.

ಜಂಕ್ ಫುಡ್

Pic credit - Pintrest

ಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳಿದ್ದು, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಎಣ್ಣೆಯಲ್ಲಿ ಕರಿದ ಆಹಾರ

Pic credit - Pintrest

ಅತಿಯಾದ ಉಪ್ಪು ಸೇವನೆಯಿಂದ ದೇಹ ನಿರ್ಜಲೀಕರಣಗೊಳ್ಳುವುದರ ಜೊತೆಗೆ ದಲಿನ ಬೇರು ದುರ್ಬಲಗೊಂಡು ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಉಪ್ಪು

Pic credit - Pintrest

ಆಲ್ಕೋಹಾಲ್ ದೇಹದಲ್ಲಿ ಸತು ಮತ್ತು ಇತರ ಅಗತ್ಯ ಪೋಷಕಾಂಶಗಳು ಕಡಿಮೆಯಾಗಲು ಕಾರಣವಾಗುತ್ತದೆ. ಸತುವಿನ ಕೊರತೆಯು ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ.

ಮದ್ಯ

Pic credit - Pintrest

 ಈ ಆಹಾರಗಳು DHT (ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನ್ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಸಂಸ್ಕರಿಸಿದ ಆಹಾರಗಳು

Pic credit - Pintrest

ಅತಿಯಾದ ಕೆಫೀನ್‌ ಸೇವನೆಯೂ ನಿರ್ಜಲೀಕರಣವನ್ನು ಉಂಟಾಗುತ್ತದೆ, ಇದು ನೆತ್ತಿಯನ್ನು ಒಣಗಿಸಿ ಕೂದಲಿನ ಬೆಳವಣಿಗೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಹೆಚ್ಚು ಕೆಫೀನ್

Pic credit - Pintrest