Pic Credit: pinterest
By Malashree anchan
9 September 2025
ಹೆಂಗಳೆಯರು ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಇದರ ಹೆಚ್ಚಿನ ಬಳಕೆಯಿಂದ ತುಟಿಗಳಿಗೆ ಹಲವು ರೀತಿಯ ಹಾನಿಯುಂಟಾಗುತ್ತದೆ.
ಲಿಪ್‌ಸ್ಟಿಕ್‌ನಲ್ಲಿರುವ ರಾಸಾಯನಿಕಗಳು ನಿಮ್ಮ ತುಟಿಯನ್ನು ಒಣಗಿಸಿ, ಬಿರುಕು ಮೂಡುವಂತೆ ಮಾಡುತ್ತದೆ.
ಲಿಪ್ಸ್ಟಿಕ್ ತುಟಿಗಳಿಗೆ ಯಾವುದೇ ನೈಸರ್ಗಿಕ ತೇವಾಂಶವನ್ನು ಒದಗಿಸುವುದಿಲ್ಲ, ಬದಲಿಗೆ ಅವು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿ ಒಡೆಯುತ್ತದೆ.
ಕೆಲವು ಲಿಪ್‌ಸ್ಟಿಕ್‌ನಲ್ಲಿರುವ ಬಣ್ಣಗಳು ಮತ್ತು ರಾಸಾಯನಿಕಗಳು ತುಟಿಯನ್ನು ಕಪ್ಪಾಗಿಸುತ್ತವೆ. ಇವುಗಳ ಅತಿಯಾದ ಬಳಕೆಯಿಂದ ನಿಧಾನಕ್ಕೆ ತುಟಿಗಳ ಬಣ್ಣ ಕಪ್ಪಾಗುತ್ತವೆ.
ತುಟಿಗಳ ಚರ್ಮ ಸೂಕ್ಷ್ಮವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಲಿಪ್‌ಸ್ಟಿಕ್‌ನಲ್ಲಿರುವ ರಾಸಾಯನಿಕಗಳು ತುಟಿಯ ಚರ್ಮಕ್ಕೆ ಹಾನಿಯನ್ನು ಉಂಟುಮಾಡುತ್ತದೆ.
ಅತಿಯಾದ ಲಿಪ್‌ಸ್ಟಿಕ್ ಬಳಕೆಯಿಂದ ನಿಮ್ಮ ತುಟಿಯ ನೈಸರ್ಗಿಕ ಬಣ್ಣವೇ ಮಾಸಿ ಹೋಗುತ್ತದೆ.
ತುಟಿಗೆ ಹಚ್ಚಿಕೊಳ್ಳುವ ಕೆಲವೊಮ್ಮೆ ಹೊಟ್ಟೆ ಸೇರುತ್ತವೆ. ಇದು ಸೋಂಕನ್ನು ಉಂಟುಮಾಡಬಹುದು ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು.
ಲಿಪ್ಸ್ಟಿಕ್ ಹೆಚ್ಚು ರಾಸಾಯನಿಕಗಳನ್ನು ಹೊಂದಿದ್ದರೆ ಅದು ತುಟಿಯ ಸುತ್ತಮುತ್ತಲಿನ ಚರ್ಮಕ್ಕೂ ಹಾನಿಯನ್ನು ಉಂಟುಮಾಡುತ್ತದೆ.