Pic Credit: pinterest
By Malashree Anchan
19 May 2025
ಜೀವನಶೈಲಿ, ಆಹಾರ ಪದ್ಧತಿಯಲ್ಲಿನ ಬದಲಾವಣೆಯ ಕಾರಣದಿಂದ ಮದುವೆಯ ನಂತರ ಮಹಿಳೆಯರ ದೇಹ ತೂಕ ಹೆಚ್ಚಾಗುತ್ತದೆ.
ಹೀಗಿರುವಾಗ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಮೂಲಕ ದೇಹ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
ಮದುವೆಯ ಬಳಿಕ ಪಾರ್ಟಿ ಅಂತೆಲ್ಲಾ ನಡೆಯುತ್ತಿರುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಮಿತ ಪ್ರಮಾಣದ ಆಹಾರ ಸೇವಿಸಿ.
ಎಣ್ಣೆ ಪದಾರ್ಥಗಳ ಬದಲು ತಾಜಾ ಹಣ್ಣುಗಳು, ತರಕಾರಿಗಳಂತಹ ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ.
ಪ್ರತಿನಿತ್ಯ ನಿಮಗಾಗಿ ಅರ್ಧ ಗಂಟೆ ಸಮಯವನ್ನು ಮೀಸಲಿಟ್ಟು, ಜಾಗಿಂಗ್, ವಾಕಿಂಗ್ ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳನ್ನು ಮಾಡಿ.
ಪ್ರತಿದಿನ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಹೀಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ತ್ಯಾಜ್ಯವನ್ನು ಹೊರ ಹಾಕಬಹುದು.
ತಾಜಾ ಹಣ್ಣಿನ ಜ್ಯೂಸ್, ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ಕೂಡಾ ರೂಢಿಸಿಕೊಳ್ಳಿ. ಇದು ಕೂಡಾ ತೂಕ ಇಳಿಕೆಗೆ ಸಹಕಾರಿ.
ಒತ್ತಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಒತ್ತಡವನ್ನು ನಿವಾರಿಸಲು ಯೋಗ, ಧ್ಯಾನ, ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ.