Pic Credit: pinterest
By Malashree Anchan
08 May 2025
ಧೂಮಪಾನ ಒಂದು ಕೆಟ್ಟ ಅಭ್ಯಾಸವಾಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಿರುವಾಗ ಈ ಅಭ್ಯಾಸವನ್ನು ತ್ಯಜಿಸಬೇಕು ಎಂದಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ಕಿತ್ತಳೆ ಮತ್ತು ಸ್ಟ್ರಾಬೆರಿಗಳಂತಹ ವಿಟಮಿನ್ ಸಿ ಭರಿತ ಆಹಾರಗಳನ್ನು ಸೇವಿಸಿ, ಇದು ಧೂಮಪಾನವನ್ನು ತ್ಯಜಿಸಲು ನಿಮಗೆ ಸಹಾಯ ಮಾಡುತ್ತದೆ.
ಹಾಲು, ಬೆಣ್ಣೆ, ಮೊಸರು ಮತ್ತು ಚೀಸ್‌ನಂತಹ ಡೈರಿ ಉತ್ಪನ್ನಗಳು ಕ್ಯಾಸೀನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ, ಇದು ನಿಕೋಟಿನ್ ಹಂಬಲವನ್ನು ಕಡಿಮೆ ಮಾಡುತ್ತದೆ.
ಧೂಮಪಾನವನ್ನು ತ್ಯಜಿಸಲು ಗ್ರೀನ್ ಟೀ ಅತ್ಯಂತ ಪರಿಣಾಮಕಾರಿ ಪಾನೀಯಗಳಲ್ಲಿ ಒಂದಾಗಿದೆ.
ಚೂಯಿಂಗ್ ಗಮ್ ನಿಗದಿತ ಪ್ರಮಾಣದ ನಿಕೋಟಿನ್ ಅಂಶವನ್ನು ಒದಗಿಸುತ್ತದೆ, ಇದು ಧೂಮಪಾನ ಚಟವನ್ನು ಬಿಡಲು ಸಹಾಯ ಮಾಡುತ್ತದೆ.
ನಿಮಗೆ ಸಿಗರೇಟ್ ಸೇದಬೇಕು ಎನಿಸಿದಾಗಲೆಲ್ಲಾ ನಿಮ್ಮ ನೆಚ್ಚಿನ ಆಹಾರ ಪದಾರ್ಥಗಳನ್ನು ತಿನ್ನಿರಿ.
ನಿಮಗೆ ಧೂಮಪಾನ ಮಾಡಬೇಕೆಂದು ಅನಿಸಿದಾಗ, ಚಿತ್ರ ಬಿಡಿಸುವುದು, ವಾಕಿಂಗ್, ಸಂಗೀತ ಕೇಳುವುದು, ನೃತ್ಯ ಮಾಡುವುದು ಅಥವಾ ಹಾಡುವಂತಹ ಕೆಲಸವನ್ನು ಮಾಡಲು ಪ್ರಯತ್ನಿಸಿ.
ನೀವು ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಧೂಮಪಾನದ ಅಭ್ಯಾಸವನ್ನು ತ್ಯಜಿಸಬಹುದು.